ನವದೆಹಲಿ : ಕಪ್ಪು ಹಣ ಇರುವವರ ಕುರಿತು ಇ-ಮೇಲ್ ಮೂಲಕ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದ 72 ಗಂಟೆಗಳಲ್ಲಿ 4000 ಇ-ಮೇಲ್ ಬಂದಿವೆ.
ಕಳೆದ ಶುಕ್ರವಾರ ಮೋದಿ ಸರ್ಕಾರದಿಂದ ಹೊಸ ಯೋಜನೆ ಪ್ರಾರಂಭವಾಗಿದ್ದು ಸಾರ್ವಜನಿಕರು ಕಪ್ಪು ಹಣ ಇರುವವರ ಬಗ್ಗೆ ಮಾಹಿತಿಯಿದ್ದಲ್ಲಿ ಅದನ್ನು ಸರ್ಕಾರಕ್ಕೆ ಇ-ಮೇಲ್ ಕಳುಹಿಸುವ ಮುಖಾಂತರ ಕಪ್ಪು ಹಣ ಬಹಿರಂಗಪಡಿಸುವಲ್ಲಿ ಸಹಾಯ ಮಾಡಬಹುದಾಗಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮನವಿ ಮಾಡಿದ 72 ಗಂಟೆಗಳಲ್ಲಿ ಸುಮಾರು 4000 ಮಾಹಿತಿಗಳು ಆದಾಯ ತೆರಿಗೆ ಇಲಾಖೆಯ blackmoneyinfo@incometax.gov.in ಇ-ಮೇಲ್ಗೆ ಸಂದೇಶಗಳು ಬಂದಿವೆ.
ಈ ಮನವಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಂದಿರುವ ಎಲ್ಲಾ ಇ-ಮೇಲ್ಗಳನ್ನು ಪರಿಶೀಲಿಸಲಾಗುವುದು. ಕಪ್ಪು ಹಣ ಹೊಂದಿರುವವರ ಕುರಿತು ನೀಡಿರುವ ಮಾಹಿತಿ (ಇ-ಮೇಲ್) ನಿಜವಾಗಿದ್ದಲ್ಲಿ ತನಿಖೆ ಮಾಡಲಾಗುವುದು. ಜನರು ಒದಗಿಸುತ್ತಿರುವ ಮಾಹಿತಿಯಿಂದ ಸರ್ಕಾರವು ಕಪ್ಪು ಹಣದ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಧ್ಯವಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಲಿಮಿಟ್ಗಿಂತ ಜಾಸ್ತಿ ಜಮೆ ಅಥವಾ ವಿತ್ಡ್ರಾ ಆಗುತ್ತಿರುವ ಹಣ, ವಿವಿಧ ವ್ಯವಹಾರಗಳ ಕುರಿತು ಬ್ಯಾಂಕುಗಳಿಂದ ಮಾಹಿತಿಯು ಹಣಕಾಸು ಸಚಿವಾಲಯಕ್ಕೆ ಮಾಹಿತಿ ರವಾನೆಯಾಗುತ್ತಿದೆ. ಸಂಶಯಾಸ್ಪದ ನಡೆ ಕಂಡುಬಂದಲ್ಲಿ ಅದನ್ನು ಆದಾಯ ತೆರಿಗೆ ಇಲಾಖೆ, ಇತರೆ ತನಿಖಾ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡಿ ತನಿಖೆ ನಡೆಸಲಾಗುತ್ತದೆ. ಸಂಶಯಾಸ್ಪದ ವ್ಯವಹಾರಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.