ನವದೆಹಲಿ: ಭಾರತ ಮತ್ತು ಕಿರ್ಗಿಸ್ಥಾನ್ ಮಂಗಳವಾರ ಪ್ರವಾಸೋದ್ಯಮ, ಕೃಷಿ, ಆಹಾರ ಉದ್ಯಮ, ಯುವಜನಾಭಿವೃದ್ಧಿ ಹಾಗೂ ಆಡಿಯೊ-ವಿಜುವಲ್ ಕಾರ್ಯಕ್ರಮಗಳಗಳ ಪ್ರಸಾರ ಮತ್ತು ವಿನಿಮಯಗಳು ಸೇರಿದಂತೆ ಆರು ಒಪ್ಪಂಗಳಿಗೆ ಸಹಿ ಹಾಕಿವೆ.
ಕಿರ್ಗಿಸ್ತಾನದ ಅಲ್ಮಜ್ಬೇಕ್ ಶರ್ಶೆನೋವಿಚ್ ಅತಂಬೇಯಿವ್ ನೇತೃತ್ವದ ನಿಯೋಗ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಮಾತುಕತೆ ಬಳಿಕ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಒಪ್ಪಂದಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಚಾರಗಳ ವಿನಿಮಯ ಮತ್ತು ಅದರ ವಿಸ್ತರಣೆ ಹಾಗೂ ಜೆಡಬ್ಲೂಜಿ ಮೂಲಕ ಪ್ರವಾಸೋದ್ಯಮ ಸಹಕಾರ ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಭಾರತದ ಪ್ರವಾಸೋದ್ಯಮ ಸಚಿವಾಲಯ ಮತ್ತು ಕಿರ್ಗಿಸ್ಥಾನ ಸರಕಾರದ ಸಂಸ್ಕೃತಿ, ಮಾಹಿತಿ ಹಾಗೂ ಪ್ರವಾಸೋದ್ಯಮ ಸಚಿವಾಲಯ ಇಲಾಖೆಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ.
ಅಲ್ಲದೇ ಕೃಷಿ ಮತ್ತು ಆಹಾರ ಉದ್ಯಮ ಕ್ಷೇತ್ರಗಳ ಸಹಕಾರಕ್ಕೆ ಅನುಕೂಲಕರ ಉದ್ದೇಶಕ್ಕಾಗಿ ಎರಡೂ ದೇಶದ ಅನುಭವ ಮತ್ತ ಪರಿಣತಿಯನ್ನು ಹಂಚಿಕೊಳ್ಳಲು ಕೃಷಿ ಒಪ್ಪಂದಕ್ಕೆ ಸಹಿಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.