ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಮಂಜು ಕವಿದ ವಾತಾವರಣ ಉಂಟಾಗಿದ್ದು, ಈ ಕಾರಣ ರೈಲು ಮತ್ತು ವಿಮಾನಯಾನ ಸಂಚಾರ ಸಮಸ್ಯೆ ಮುಂದುವರೆದಿದೆ.
ದೆಹಲಿ-ಎನ್ಸಿಆರ್ ಪ್ರದೇಶಗಳ ಸುಮಾರು ೨೪ ರೈಲುಗಳು ವಿಳಂಬವಾಗಿದ್ದು, ಇತರ 5 ರೈಲುಗಳು ಸಮಯ ನದಲಿಸಲಾಗಿದೆ. ಕೆಟ್ಟ ಹವಾಮಾನದ ಕಾರಣ ಒಂದು ರೈಲನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ಮತ್ತು ಆಗಮಿಸಬೇಕಿದ್ದ 6 ಅಂತಾರಾಷ್ಟ್ರೀಯ ಹಾಗೂ 8 ದೇಶೀಯ ವಿಮಾನಗಳು ಮಂಜಿನ ವಾತಾವರಣದಿಂದ ಗೋಚರತೆ ಸಮಸ್ಯೆಯಿಂದಾಗಿ ವಿಳಂಬವಾಗಿ ಸಂಚರಿಸಲಿವೆ ಎಂದು ವಿಮಾನ ನಿಲ್ದಾಣದ ನಿರ್ವಹಣೆ ನಡೆಸುತ್ತಿರುವ ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಟ್ ತಿಳಿಸಿದೆ.
ಭಾನುವಾರ ಬೆಳಗಿನ ಜಾವ ಭಾರೀ ಮಂಜು ಕವಿದಿದ್ದು, ದೆಹಲಿಯಲ್ಲಿ ಕನಿಷ್ಠ ತಾಪಮಾನ 7.2 ಡಿಗ್ರಿ ಸೆಲ್ಸಿಯಸ್ ದಖಲಾಗಿದ್ದು, ಈ ಋತುವಿನ ಸರಾಸರಿ ತಾಪಮಾನಕ್ಕಿಂತ ಕೆಳಮಟ್ಟದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.