ನವದೆಹಲಿ: ಭಯೋತ್ಪಾದಕರನ್ನು ಬಂಧನದಲ್ಲಿ ಇಡುವುದಕ್ಕಾಗಿಯೇ ನಗರದ ಹೊರವಲಯದಲ್ಲಿ ಪ್ರತ್ಯೇಕ ಮತ್ತು ಹೊಸ ಜೈಲುಗಳನ್ನು ಸ್ಥಾಪಿಸಿ ಎಂದು ಎಲ್ಲಾ ರಾಜ್ಯಗಳಿಗೆ ಗೃಹಸಚಿವಾಲಯ ಸೂಚನೆ ನೀಡಿದೆ.
ಪ್ರತ್ಯೇಕ ಜೈಲುಗಳನ್ನು ಸ್ಥಾಪನೆ ಮಾಡುವವರೆಗೂ ಅಪಾಯಕಾರಿ ಭಯೋತ್ಪಾದಕರು ಇತರ ಕೈದಿಗಳ ಸಂಪರ್ಕಕ್ಕೆ ಬರದಂತೆ ಜೈಲಿನೊಳಗೆ ಕಠಿಣ ನಿರ್ಬಂಧಗಳನ್ನು ಹೇರಬೇಕು ಎಂದು ತಿಳಿಸಿದೆ.
ಅಲ್ಲದೇ ಸದಾ ಕಾಲ ಅವರ ಮೇಲೆ ಕಣ್ಣಿಟ್ಟಿರಬೇಕು, ಯಾರೆಲ್ಲ ಅವರನ್ನು ಭೇಟಿಯಾಗುತ್ತಾರೆ ಎಂಬುದರ ಮೇಲೆ ನಿಗಾ ಇಡಬೇಕು, ಇತರ ಕೈದಿಗಳನ್ನು ಅವರು ಎತ್ತಿಕಟ್ಟದಂತೆ ಎಚ್ಚರವಹಿಸಬೇಕು ಎಂದಿದೆ.
ಸೆಂಟ್ರಲ್ ಸೆಕ್ಯೂರಿಟಿ ಏಜೆನ್ಸಿಗಳು ನೀಡಿದ ವರದಿಯ ಹಿನ್ನಲೆಯಲ್ಲಿ ಗೃಹಸಚಿವಾಲಯ ಈ ಸೂಚನೆಯನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.