ಲೇಹ್: ಸಾಂಪ್ರದಾಯಿಕ ಕ್ರೀಡೆಯನ್ನು ಸಂರಕ್ಷಿಸುವ ಮತ್ತು ದಿವ್ಯಾಂಗ ಜನರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಪೀಪಲ್ಸ್ ಆ್ಯಕ್ಷನ್ ಗ್ರೂಪ್ ಫಾರ್ ಇನ್ಕ್ಲೂಷನ್ ಎಂಡ್ ರೈಟ್ಸ್ (PAGIR) ಹೋಟೆಲ್ ಇಂಡಸ್ನ ಅಂಗಳದಲ್ಲಿ ಬಿಲ್ಲುಗಾರಿಕೆ ಕ್ರೀಡಾಕೂಟ 2016 ಆಯೋಜಿಸಿದೆ.
ಲೇಹ್ನ ವಿವಿಧ ಜಿಲ್ಲೆಗಳಿಂದ 24 ತಂಡಗಳ ಒಟ್ಟು 96 ಜನರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
ದಿವ್ಯಾಂಗ ಜನರ ಸಾಮರ್ಥ್ಯವನ್ನು ಹೆಚ್ಚಿಸಿ, ಮುಖ್ಯವಾಹಿನಿಗೆ ತರುವ ಮೂಲಕ ಸಮಾಜದ ಅಭಿವೃದ್ಧಿ ಸೂಚಿಯಲ್ಲಿ ಅವರನ್ನು ಸೇರ್ಪಡೆಗೊಳಿಸುವುದು ನಮ್ಮ ಮುಖ್ಯ ಉದ್ದೇಶ ಎಂದು PAGIR ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಹೇಳಿದ್ದಾರೆ.
ಪರಿಸರ ಸಂರಕ್ಷಣೆ, ಸಮುದಾಯಗಳ ಜೀವನೋಪಾಯಗಳ ಪ್ರಚಾರ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಕೂಡ PAGIR ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನಾಮನಿರ್ದೇಶಿತ ಶಾಸಕ ಮೊಹಮ್ಮದ್ ನಾಸಿರ್ ಹಾಗೂ ರಿಂಚೆನ್ ಲ್ಯಾಮೋ ಸಿಸಿಡಿಎಫ್ ನಿಧಿಯಿಂದ ತಲಾ 50,000 ರೂ. ಮತ್ತು 1 ಲಕ್ಷ ರೂ. ದಾನ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.