ನವದೆಹಲಿ: ಕೇಂದ್ರ ಸರ್ಕಾರ ಇಲೆಕ್ಟ್ರಾನಿಕ್ ವ್ಯವಹಾರಗಳ ಅನುದಾನಗಳ ಕ್ರಮಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿ ನಡೆಸುವ ವ್ಯಕ್ತಿಗಳು, ಸಣ್ಣ ವ್ಯಾಪಾರಸ್ಥರು, ಅಂಗಡಿ ಮಾಲೀಕರಿಗೆ ‘ಮಾಸಿಕ ಬಹುಮಾನ’ ನೀಡಲಾಗುವುದು.
ಆನ್ಲೈನ್ ಅಥವಾ ನಗದುರಹಿತ ವಹಿವಾಟುಗಳಿಗೆ ಗಮನಾರ್ಹವಾಗಿ ಬದಲಾವಣೆಗೊಂಡ ವ್ಯಕ್ತಿಗಳು, ಸಣ್ಣ ವ್ಯಾಪಾರಸ್ಥರಿಗೆ ‘ಲಕಿ ಗ್ರಾಹಕ್ ಯೋಜನಾ’ ಮತ್ತು ‘ಡಿಜಿ ಧನ್ ವ್ಯಾಪಾರಿ ಯೋಜನಾ’ ಬಹುಮಾನ ನೀಡಲಾಗುವುದು.
ಲಕಿ ಗ್ರಾಹಕ್ ಯೋಜನೆ ಅಡಿಯಲ್ಲಿ ಗಾಹಕರು ರೂ.50ರಿಂದ ರೂ. 3000 ವರೆಗಿನ ಗ್ರಾಹಕ ವ್ಯವಹಾರಗಳಿಗೆ ದೈನಂದಿನ ಹಾಗೂ ಸಾಪ್ತಾಹಿಕ ಮೆಗಾ ಬಹುಮಾನ ಪಡೆಯಲಿದ್ದಾರೆ. ದೈನಂದಿನ ಬಹುಮಾನ ರೂ. 1000 ಹಾಗೂ ಸಾಪ್ತಾಹಿಕ ಬಹುಮಾನ ರೂ. 1 ಲಕ್ಷ ಇರಲಿದೆ.
ಡಿಜಿ ವ್ಯಾಪಾರಿ ಧನ್ ಯೋಜನೆ ಅಡಿಯಲ್ಲಿ ರೂ.50ರಿಂದ ರೂ. 3000 ವರೆಗಿನ ವ್ಯಾಪಾರಿ ವ್ಯವಹಾರಗಳಿಗೆ ದೈನಂದಿನ ಹಾಗೂ ಸಾಪ್ತಾಹಿಕ ಮೆಗಾ ಬಹುಮಾನ ಪಡೆಯಲಿದ್ದಾರೆ. ದೈನಂದಿನ ಬಹುಮಾನ ರೂ. 1000 ಹಾಗೂ ಸಾಪ್ತಾಹಿಕ ಬಹುಮಾನ ರೂ. 50 ಲಕ್ಷ ಇರಲಿದೆ. ಈ ಯೋಜನೆಗಳು ಡಿಸೆಂಬರ್ ೨೫ರಿಂದ ಆರಂಭವಾಗಲಿದೆ ಎಂದು ನೀತಿ ಆಯೋಗ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.
ಈ ನಗದು ಬಹುಮಾನ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಸರ್ಕಾರ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಬಹುಮಾನಗಳ ಇತರ ಮಾಹಿತಿಗಳನ್ನು ಬಿಡುಗಡೆ ಮಾಡಿಲ್ಲ. ಆದನ್ನು ಶೀಘ್ರದಲ್ಲೇ ಸರ್ಕಾರ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಡಿಜಿಟಲ್ ವ್ಯವಹಾರವನ್ನು ಪ್ರಚಾರ ಮಾಡುವ ಸಣ್ಣ ವ್ಯಾಪಾರಸ್ಥರಿಗೆ 3-6 ತಿಂಗಳಿಗೊಮ್ಮೆ ‘ಬಂಪರ್ ಬಹುಮಾನ’ ನೀಡಲು ಸರ್ಕಾರ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ಅನಾಣ್ಯೀಕರಣದ ನಂತರ ಡಿಜಿಟಲ್ ವ್ಯವಹಾರಗಳಲ್ಲಿ ಹೆಚ್ಚಳ ಕಂಡಿದೆ. ಈ ಕ್ರಮದಿಂದ ಹೆಚ್ಚೆಚ್ಚು ಭಾರತೀಯರು ಬ್ಯಾಂಕ್ ಖಾತೆ ತೆರೆದು ಮೂಲಭೂತ ಆರ್ಥಿಕತೆ ಮೂಲಕ ಡಿಜಿಟಲ್ ವ್ಯವಹಾರಕ್ಕೆ ಬದಲಾಯಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸರ್ಕಾರ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.