ನವದೆಹಲಿ: ಬಿಜೆಪಿ ಪಕ್ಷದ ಸಾರ್ವಜನಿಕ ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವೇದಿಕೆ ಹಂಚಿಕೊಳ್ಳುವಲ್ಲಿ ನಾಯಕರ ನಡುವೆ ನಾಮುಂದು-ತಾಮುಂದು ಎಂದು ನೂಕುನುಗ್ಗಲು ತೀವ್ರಗೊಳ್ಳುತ್ತಿದೆ.
ಬಿಜೆಪಿ ಸಮಾವೇಶಗಳಲ್ಲಿ ಪ್ರಧಾನಿ ಜೊತೆ ವೇದಿಕೆ ಹಂಚಿಕೊಳ್ಳುವ ನಾಯಕರ ಮಿತಿಯನ್ನು ಪಕ್ಷ 7ಕ್ಕೆ ನಿಗದಿಪಡಿಸಲಾಗಿದ್ದು, ಚುನಾವಣಾ ನಿರತ ರಾಜ್ಯಗಳಲ್ಲಿ ವೇದಿಕೆ ಹಂಚಿಕೊಳ್ಳುವ ನಾಯಕರ ಸಂಖ್ಯೆಯನ್ನು 11ಕ್ಕೆ ಸೀಮಿತಗೊಳಿಸಲು ಪಕ್ಷ ನಿರ್ಧರಿಸಿದೆ.
ಇದು ಮೋದಿ ಸಮಾವೇಶಗಳಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಕಳುಹಿಸಿದ ‘ಡೂಸ್ ಎಂಡ್ ಡೋಂಟ್ಸ್’ (ಮಾಡಬಹುದಾದ ಮತ್ತು ಮಾಡಬಾರದ್ದು) ಇದರ ಭಾಗವಾಗಿದೆ.
ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಬಹುದಾದ ನಾಯಕರು, ವಿಮಾನ ನಿಲ್ದಾಣಗಳು ಮತ್ತು ಹೆಲಿಪ್ಯಾಡ್ಗಳಲ್ಲಿ ಅವರನ್ನು ಸ್ವಾಗತಿಸಬಹುದಾದ ನಾಯಕರ ಪಟ್ಟಿಯನ್ನು ಪ್ರತಿ ರ್ಯಾಲಿಯ ಒಂದು ವಾರ ಮುಂಚಿತವಾಗಿ ನೀಡುವಂತೆ ಬಿಜೆಪಿ ಕಚೇರಿ ಸೂಚಿಸಿದೆ.
ಮೋದಿ ಸಮಾವೇಶದ 10 ದಿನಗಳ ಮೊದಲು ಪಾಯಿಂಟರ್ಸ್ಗಳನ್ನು ಕಳುಹಿಸುವಂತೆ ಹಾಗೂ ಪಿಎಂಒ ಜೊತೆ ಸಹಕರಿಸುವಂತೆ ಹಿರಿಯ ನಾಯಕರನ್ನು ನೇಮಿಸುವಂತೆ ಕೇಳಿಕೊಂಡಿದೆ. ಪ್ರಧಾನಿ ಸಮಾವೇಶದ 10 ದಿನಗಳ ಮುನ್ನ ರ್ಯಾಲಿ ನಡೆಯುವ ಪ್ರದೇಶದಲ್ಲಿ ಹಾಗೂ ಬಿಜೆಪಿ ಕಚೇರಿಯಲ್ಲಿ ಪ್ರತಿ ನಿತ್ಯ ಸ್ವಚ್ಛತಾ ಕಾರ್ಯ ನಡೆಸುವಂತೆ ಹೇಳಲಾಗಿದೆ.
ಮುಖಂಡರು ಮೋದಿ ರ್ಯಾಲಿ ವೇಳೆ ಹೋರ್ಡಿಂಗ್ ಮತ್ತು ಪೋಸ್ಟರ್ಸ್ಗಳಿಗೆ ಸಮಾನ ಟೆಂಪ್ಲೇಟ್ ಬಳಸುವಂತೆ ಹಾಗೂ ಇವು ಪ್ರತ್ಯೇಕ ‘ಸಂದೇಶ’ ಸಾರುವಂತೆ ಇರಬೇಕು. ಪ್ರತಿ ಪೋಸ್ಟರ್ಗಳಲ್ಲಿ ಕೇಂದ್ರ ಸರ್ಕಾರದ ವಿವಧ ಯೋಜನೆಗಳನ್ನು ಮತ್ತು ಸಾಧನೆಗಳನ್ನು ಬಿಂಬಿಸಬೇಕು ಎಂದು ಹೇಳಲಾಗಿದೆ.
ಇದರೊಂದಿಗೆ ಸ್ಥಳೀಯ ಮುಖಂಡರು ಪ್ರಧಾನಿ ಮೋದಿ ಜೊತೆ ತಮ್ಮ ಫೋಟೋ ಹೊಂದಿರುವ ದೊಡ್ಡ ಪೋಸ್ಟರ್ಗಳಿಗೆ ಅನುಮತಿ ನೀಡಲಾಗುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.