ಮುಂಬೈ : ನವೆಂಬರ್ 8 ರಿಂದ ಡಿಸೆಂಬರ್ 30 ರ ವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡದೆ ಅವುಗಳನ್ನು ಸಂಗ್ರಹಿಸಿಡುವಂತೆ ರಾಷ್ಟ್ರೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ಗಳಿಗೆ ನಿರ್ದೇಶಿಸಿದೆ.
500 ರೂ. ಮತ್ತು 1000 ರೂ. ಮುಖಬೆಲೆಯ ನೋಟು ನಿಷೇಧದ ನಂತರ ಕಪ್ಪು ಹಣ ಬಿಳಿಯಾಗಿಸಲು ಬ್ಯಾಂಕಿನಲ್ಲಿರುವವರೇ ಕಾಳಧನಿಕರಿಗೆ ಸಹಕರಿಸುತ್ತಿದ್ದಾರೆ ಎಂಬ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಇದರನ್ವಯ ಆರ್ಬಿಐ ಎಲ್ಲಾ ಬ್ಯಾಂಕ್ಗಳಿಗೂ ನವೆಂಬರ್ 8 ರಿಂದ ಡಿಸೆಂಬರ್ 30 ರವರೆಗಿನ ಬ್ಯಾಂಕ್ ವ್ಯವಹಾರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡದೆ ಅವುಗಳನ್ನು ಸಂಗ್ರಹಿಸುಡುವಂತೆ ಸೂಚನೆ ನೀಡಿದೆ.
ಆರ್ಬಿಐ ಹೊರಡಿಸುರವ ಸುತ್ತೋಲೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳಿಂದ ನೋಟು ಅಕ್ರಮ ಪ್ರಕರಣಗಳ ತನಿಖೆಗೆ ಅನುಕೂಲವಾಗಲಿದೆ. ಈ ಕುರಿತು ತನಿಖಾ ತಂಡಕ್ಕೂ ಅಗತ್ಯ ಮಾಹಿತಿ ಒದಗಿಸುತ್ತೇವೆ. ಪ್ರತಿ ಬ್ಯಾಂಕ್ಗಳು ಖಜಾನೆಯಿಂದ ತೆಗೆಯುವ ನೊಟು ಹಾಗೂ ಅವುಗಳನ್ನು ಯಾರಿಗೆ ನೀಡಲಾಗುವುದು ಎಂಬ ಕುರಿತು ವರದಿಯನ್ನು ಆರ್ಬಿಐಗೆ ನೀಡಬೇಕು. ವಿತರಿಸಲಾಗಿರುವ ಹೊಸ ನೋಟುಗಳ ಸರಣಿಯ ಕುರಿತು ಕೂಡಾ ಮಾಹಿತಿ ನೀಡಬೇಕು ಎಂದು ಎಲ್ಲಾ ಬ್ಯಾಂಕ್ಗಳಿಗೆ ನಿರ್ದೇಶಿಸಿದೆ.
ಅಕ್ಟೋಬರ್ 27 ರಂದು ಬ್ಯಾಂಕಿಂಗ್ ಹಾಲ್, ಕೌಂಟರ್ ಮತ್ತು ಖಜಾತೆ ಇರುವ ಸ್ಥಳಗಳಲ್ಲಿ ಸಿಸಿಟಿವಿಯನ್ನು ಎಲ್ಲಾ ಬ್ಯಾಂಕ್ಗಳಲ್ಲೂ ಅಳವಡಿಸುವಂತೆ ಆರ್ಬಿಐ ಸೂಚಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.