ನವದೆಹಲಿ: ಒಂದು ಮಹತ್ವದ ಬೆಳವಣಿಗೆಯಂತೆ ಭಾರತ ಮತ್ತು ವಿಯೆಟ್ನಾಂ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ.
ಪೂರ್ವ ಏಷ್ಯಾದ ಪ್ರಭಾವಶಾಲಿ ರಾಷ್ಟ್ರ ವಿಯೆಟ್ನಾಂ ಜೊತೆಗಿನ ಈ ಒಪ್ಪಂದ ಎರಡೂ ರಾಷ್ಟ್ರಗಳ ನಡುವೆ ಸಮಗ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ವಾಯುಯಾನ ಸಂಪರ್ಕ ಹೆಚ್ಚಿಸಲು, ಇಂಧನ ಶಕ್ತಿ ಸಾಮರ್ಥ್ಯ ಮತ್ತು ಸಂಸದೀಯ ಸಹಕಾರ ಪ್ರಚಾರದ ಕ್ಷೇತ್ರಗಳಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸಲು ಉಭಯ ಇತರ ಮೂರು ಒಪ್ಪಂದಗಳಿಗೂ ಸಹಿ ಹಾಕಿವೆ.
ಎರಡು ದೇಶಗಳ ನಡುವೆ ಸಂಬಂಧಗಳನ್ನು ಬಲಪಡಿಸುವ ಗುರಿಯೊಂದಿಗೆ ಒಪ್ಪಂದ ಮಾತುಕತೆ ಬಳಿಕ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಉಪಸ್ಥಿತಿಯಲ್ಲಿ ವಿಯೆಟ್ನಾಂ ರಾಷ್ಟ್ರೀಯ ಸಂಸತ್ ಅಧ್ಯಕ್ಷೆ ನಯನ್ ತಿ ಕಿಂ ನನ್ ಅವರು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ವಿಯೆಟ್ನಾಂ ರಾಷ್ಟ್ರೀಯ ಸಂಸತ್ ನಿಯೋಗದ ನೇತೃತ್ವ ವಹಿಸಿರುವ ಕಿಂ ನನ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಶಾಂತಿಯುತ ಬಳಕೆಯ ಅಣುಶಕ್ತಿ ಸಹಕಾರ ಒಪ್ಪಂದ ಸಮಗ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸೆಪ್ಟೆಬರ್ ತಿಂಗಳಿನಲ್ಲಿ ವಿಯೆಟ್ನಾಂನ ಹನೋಯ್ನಲ್ಲಿ ಕಿಂ ನನ್ ಅವರನ್ನು ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿದ ಪ್ರಧಾನಿ ಮೋದಿ ಅವರು,ನನ್ ಅವರು ವಿಯೆಟ್ನಾಂ ರಾಷ್ಟ್ರೀಯ ಸಂಸತ್ನ ಮೊದಲ ಮಹಿಳೆ ಅಧ್ಯಕ್ಷೆಯಾಗಿದ್ದಾರೆ. ಅವರು ವಿಶ್ವದಾದ್ಯಂತ ಮಹಿಳೆಯರಿಗೆ ಸ್ಪೂರ್ತಿಯ ಮೂಲವಾಗಿದ್ದಾರೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.