ಶ್ರೀರಂಗಪಟ್ಟಣ : ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಕಾಲದ ರಾಜರ್ಷಿಯಾಗಿದ್ದ ಶ್ರೀ ವ್ಯಾಸರಾಯರಿಂದ ಶ್ರೀರಂಗಪಟ್ಟಣದ ಪೂರ್ವ ದಿಕ್ಕಿನ ಕೋಟೆಯ ಒಳಪ್ರವೇಶ ದ್ವಾರದಲ್ಲಿ ಭವ್ಯವಾದ ಮೂಡಲು ಬಾಗಿಲು ಶ್ರೀ ಆಂಜನೇಯ ಸ್ವಾಮಿ ಮಂದಿರ ನಿರ್ಮಾಣವಾಗಿದೆ.
ಈ ಭವ್ಯವಾದ ಮಂದಿರದಲ್ಲಿ ಮೂಡಲು ಬಾಗಿಲು ಶ್ರೀ ಆಂಜನೇಯ ಸ್ವಾಮಿಯನ್ನು 1789ರಲ್ಲಿ ಮತಾಂಧ, ಕನ್ನಡ ವಿರೋಧಿ (ಪರ್ಶಿಯನ್ ಪ್ರೇಮಿ), ಹಿಂದು ದ್ವೇಷಿ, ರಾಷ್ಟ್ರಕ್ಕೆ ಮತ್ತು ಮೈಸೂರು ಅರಸರಿಗೆ ದ್ರೋಹ ಬಗೆದ ಟಿಪ್ಪು ಗರ್ಭಗುಡಿಯಿಂದ ಕಿತ್ತ ನಂತರ ಗರ್ಭಗುಡಿ ಮುಚ್ಚಿ ಕಾವೇರಿ ನದಿಗೆ ಎಸೆದ. ಅದರೆ ಶ್ರೀ ಅಂಜನೇಯ ಸ್ವಾಮಿಯ ಭಕ್ತರು ಅಂದೇ ಪೇಟೆಬೀದಿಯಲ್ಲಿ ಉತ್ತರ ದಿಕ್ಕಿಗೆ ಮೂಲ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ.
ಕಳೆದ ವರ್ಷದಿಂದ ವೈಚಾರಿಕ ದಿವಾಳಿತನಕ್ಕೆ ಇಳಿದ ಕಾಂಗ್ರೇಸ್ನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಅಚರಿಸಿ ತನ್ನದು ರಾಷ್ಟ್ರದ ಮೇಲೆ ಅಕ್ರಮಣಗೈದ ಬಾಬರ್-ಟಿಪ್ಪುವಿನ ಸಂತತಿಯೆಂದು ಜಗಜ್ಜಾಹೀರುಗೊಳಿಸಿಕೊಂಡಿದೆ.
ರಾಷ್ಟ್ರಭಕ್ತ ಹಿಂದುಗಳಾದ ನಾವು ಬಾಬರ್-ಟಿಪ್ಪುವಿನ ಅಕ್ರಮಣದ ಕಹಿ ನೆನಪುಗಳಾಗಲೀ – ಈ ದುಷ್ಟ ಸಂತತಿಯವರ ಅಪಮಾನದ ಅಚರಣೆಗಾಗಲೀ ಹಿಂದುಸ್ಥಾನದಲ್ಲಿ ಅವಕಾಶ ನೀಡುವುದಿಲ್ಲ ಎಂಬ ಸಂಕಲ್ಪಗೈವ ಹಾಗೂ ಇತಿಹಾಸದಲ್ಲಿ ಆದ ಅಕ್ರಮಣ ಮತ್ತು ಪ್ರಸ್ತುತ ಅಗುತ್ತಿರುವ ಅಪಮಾನಕ್ಕೆ ಉತ್ತರ ನೀಡುತ್ತ ಹಿಂದು ಸ್ವಾಭಿಮಾನವನ್ನು ಮತ್ತೊಮ್ಮೆ ಪ್ರತಿಷ್ಠಾಪಿಸಲು ಎಲ್ಲರಿಗೂ ಸುವರ್ಣ ಅವಕಾಶ ಒದಗಿ ಬಂದಿದೆ.
ಅದುವೇ ಶ್ರೀರಂಗಪಟ್ಟಣದ ಮೂಡಲು ಬಾಗಿಲು ಶ್ರೀ ಆಂಜನೇಯ ಸ್ವಾಮಿ ಮಾಲಾಧಾರಣೆ ಮಹೋತ್ಸವ ಮತ್ತು ಶ್ರೀರಾಮ ತಾರಕ ಹೋಮ ಮಂಡ್ಯ ಜಿಲ್ಲೆಯ ಈ ಕೆಳಕಂಡ ಅಯಾ ತಾಲೂಕುಗಳಲ್ಲಿ ದಿನಾಂಕ 4-12-2016 ರಂದು ನಡೆಯಲಿದ್ದು ತಾವು ಹಾಗೂ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಿಳಿಸಿ ಮಾಲಾಧಾರಣೆ ಮಾಡಿ ಮತ್ತು ಮಾಡಿಸಿ ಎಂದು ಶ್ರೀರಂಗಪಟ್ಟಣದ ಹಿಂದೂ ಜಾಗರಣ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.