ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಚಲಾವಣೆಯಲ್ಲಿರುವ 10 ರೂ. ನಕಲಿ ನಾಣ್ಯಗಳ ವದಂತಿಗಳನ್ನು ತಿರಸ್ಕರಿಸಿದೆ. ಸಾರ್ವಜನಿಕರು ಯಾವುದೇ ಅನುಮಾನವಿಲ್ಲದೇ ಕಾನೂನಾತ್ಮಕವಾಗಿ ೧೦ರೂ. ನಾಣ್ಯವನ್ನು ಸ್ವೀಕರಿಸಬಹುದು ಎಂದು ಅದು ಹೇಳಿದೆ.
ವ್ಯಾಪಾರಸ್ಥರು, ಅಂಗಡಿ ಮಾಲೀಕರು ಸೇರಿದಂತೆ ಹಲವು ಮಾಹಿತಿ ಕೊರತೆ ಇರುವ ಅಥವಾ ಅಜ್ಞಾನಿಗಳು ದೇಶದ ನಿರ್ದಿಷ್ಟ ಭಾಗಗಳಲ್ಲಿ ಇದರ ಬಗ್ಗೆ ಜನರ ಮನಸ್ಸಿನಲ್ಲಿ ಅನುಮಾನ ಮೂಡಿಸುತ್ತಿದ್ದಾರೆ. ಇದರಿಂದ 10 ರೂ. ನಾಣ್ಯವನ್ನು ನಿರಾಕರಿಸುತ್ತಿದ್ದಾರೆ ಎಂದು ವರದಿಯಾಗಿದೆ ಎಂದು ಆರ್ಬಿಐ ತಿಳಿಸಿದೆ.
ನಾಣ್ಯಗಳು ದೀರ್ಘ ಕಾಲ ಚಲಾವಣೆಯಲ್ಲಿದ್ದು, ಇದು ವಿವಿಧ ವಿನ್ಯಾಸ ಮತ್ತು ಆಕಾರಗಳನ್ನು ಹೊಂದಿರುವ ನಾಣ್ಯಗಳು ಚಲಾವಣೆಯಲ್ಲಿರುವ ಸಾಧ್ಯತೆಗಳಿಗೆ. ಜುಲೈ 2011ರಲ್ಲಿ ‘ರುಪಾಯಿ ಚಿಹ್ನೆ’ಯನ್ನು ಪರಿಚಯಿಸಲಾಗಿತ್ತು. ಅದರಂತೆ ರೂ. 10ರ ನಾಣ್ಯದಲ್ಲಿ ರುಪಾಯಿ ಚಿಹ್ನೆ ಇರುವ ಮತ್ತು ರುಪಾಯಿ ಚಿಹ್ನೆ ಇಲ್ಲದ ನಾಣ್ಯಗಳಿವೆ. ಇವೆರಡೂ ಕಾನೂನಾತ್ಮಕ ಬಳಕೆ ಮಾನ್ಯತೆ ಪಡೆದಿವೆ ಎಂದು ಆರ್ಬಿಐ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.