ಬಾಳಾಸೋರ್: ಭಾರತ ದೇಶಿಯವಾಗಿ ನಿರ್ಮಿಸಿದ ಪರಮಾಣು ಸಾಮರ್ಥ್ಯದ ಅಗ್ನಿ-I ಖಂಡಾಂತರ ಕ್ಷಿಪಣಿಯ ಪ್ರಯೋಗಾರ್ಥ ಯಶಸ್ವಿ ಪರೀಕ್ಷೆ ನಡೆಸಿದೆ. ಇದು 700 ಕಿ.ಮೀ ದೂರ ತಲುಪಬಹುದಾಗಿದ್ದು, ಒಡಿಶಾ ಕರಾವಳಿಯಲ್ಲಿ ಪರೀಕ್ಷೆ ನಡೆಸಲಾಗಿದೆ.
ಅಬ್ದುಲ್ ಕಲಾಂ ದ್ವೀಪ(ವ್ಹೀಲರ್ ಐಸ್ಲ್ಯಾಂಡ್)ದಲ್ಲಿ ಬೆಳಗ್ಗೆ 10.10ಕ್ಕೆ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನ ಉಡಾವನಾ ಕೇಂದ್ರ-4ರಿಂದ ಮೊಬೈಲ್ ಲಾಂಚರ್ ಮೂಲಕ ಈ ಕ್ಷಿಪಣಿಯ ಯಶಸ್ವಿ ಉಡಾವಣೆ ನಡೆಸಲಾಯಿತು ಎಂದು ರಕ್ಷಣಾ ಅಧಿಕಾರಿಗಳು ತಿಳಿದ್ದಾರೆ.
ಮಧ್ಯಮ ಶ್ರೇಣಿಯ ಒಂದು-ಹಂತದ ಕ್ಷಿಪಣಿಯ ಉಡಾವಣೆಯು ಭಾರತೀಯ ಸೇನೆಯ ಸ್ಟ್ರೆಟೀಜಿಕ್ ಫೋರ್ಸ್ ಕಮಾಂಡ್ನ ತರಬೇತಿಯ ಭಾಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಗ್ನಿ-I ಕ್ಷಿಪಣಿ ನಿಖರವಾಗಿ ತನ್ನ ಗುರಿ ತಲುಪುವ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಅತ್ಯಾಧುನಿಕ ಸಂಛಿರಣ ವ್ಯವಸ್ಥೆ ಅಳವಿಸಲಾಗಿದೆ. ಟ್ರ್ಯಾಕ್ ಮಾಡಲು ಆತ್ಯಾಧುನಿಕ ರಡಾರ್ ಬ್ಯಾಟರಿಗಳು, ದೂರ ಮಾಪಕ ವೀಕ್ಷಣೆ ಕೇಂದ್ರಗಳು, ಇಲೆಕ್ಟ್ರೋ-ಆಪ್ಟಿಕ್ ಸಾಮಗ್ರಿಗಳು ಮತ್ತು ಯುದ್ಧ ನೌಕೆಗಳನ್ನು ಬಳಸಲಾಗಿದೆ ಎಂದು ವರದಿ ತಿಳಿಸಿದೆ.
12 ಟನ್ ತೂಕದ ಈ ಕ್ಷಿಪಣಿ 15 ಮೀ. ಉದ್ದವಾಗಿದ್ದು, 1 ಟನ್ಕ್ಕಿಂತಲೂ ಹೆಚ್ಚು ಭಾರದ ವಸ್ತುಗಳನ್ನು ಒಯ್ಯವಹಾಗೆ ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.