ವಾಷಿಂಗ್ಟನ್: ವೈಟ್ಹೌಸ್ನ ಸೌತ್ ಕೋರ್ಟ್ ಸಭಾಂಗಣದ ಐಸೆನ್ಹೋವರ್ ಕಾರ್ಯನಿರ್ವಹಣಾ ಕಚೇರಿ ಕಟ್ಟಡದಲ್ಲಿ ಗುರುನಾಕ್ ಜಯಂತಿಯನ್ನು ಆಚರಿಸಲಾಯಿತು.
ಗುರುನಾನಕ್ರ ೫೪೮ನೇ ಜಯಂತಿಯನ್ನು ವೈಟ್ಹೌಸನಲ್ಲಿ ಆಚರಿಸಲಾಗಿದ್ದು, ಸಿಖ್ ಸಮುದಾಯದ ಸುಮಾರು ೧೫೦ ಸದಸ್ಯರು ಹಾಗೂ ವೈಟ್ಹೌಸ್ನ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಶೇಷ ಪ್ರಾರ್ಥನೆಯೊಂದಿಗೆ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಬರಾಕ್ ಒಬಾಮಾ ಕಚೇರಿಯ ಅಧಿಕಾರಿಗಳು ಸ್ವಾಗತ ಭಾಷಣ ಮಾಡಿದರು. ಪಾವ್ಲ ಮೊಂಟ್ರೋ, ಅಮೇರಿಕನ್ ಸಿಖ್ ಸಭೆಯ ನಿರ್ದೇಶಕ ಹರ್ಪ್ರೀತ್ ಸಿಂಗ್, ಮೇಜರ್ ಕಮಲ್ ಪ್ರೀತ್ಸಿಂಗ್ ಕಾಲ್ಸಿ ಮತ್ತು ವಾರೀಸ್ ಅಹ್ಲುವಾಲಿಯಾ ಸಭೆಯಲ್ಲಿ ಭಾಗಿಯಾಗಿದ್ದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು ಸಿಖ್ ಜನಾಂಗವನ್ನು ತಪ್ಪಾಗಿ ಗುರುತಿಸಲಾಗುತ್ತಿದೆ. ಅವರನ್ನು ಮೇಲಾಗುತ್ತಿರುವ ಅಪರಾಧ ಆಪಾದನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸಿಖ್ ಸಮುದಾಯಕ್ಕೆ ಸರ್ಕಾರ ಸಹಾಯ ಮಾಡಬಹುದೆಂಬ ನಿರೀಕ್ಷೆ ಇದೆ. ಸಿಖ್ ಸಮುದಾಯದ ಬಗ್ಗೆ ಜಾಗೃತಿಯನ್ನು ಮುಡಿಸಿ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಅಮೇರಿಕಾದ ಗುರುದ್ವಾರ ಪ್ರಬಂಧಕ ಕಮಿಟಿಯ ಸಂಚಾಲಕರಾದ ಡಾ. ಪ್ರೀತ್ಪಾಲ್ ಸಿಂಗ್ ಹೇಳಿದರು.
ಲಾಹೋರ್ನ ಶೇಕ್ಪುರ ಜಿಲ್ಲೆಯ ತಲ್ವಾಂದಿ ಗ್ರಾಮದಲ್ಲಿ ಜನಿಸಿದ ಗುರು ನಾನಕ್ರು ಹತ್ತು ಸಿಖ್ ಗುರುಗಳಲ್ಲಿ ಮೊದಲನೆಯವರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.