×
Home About Us Advertise With s Contact Us

ಭಾರತದ ಗಡಿಯಲ್ಲಿ ಪಾಕ್ ಸೇನಾ ಸಮರಾಭ್ಯಾಸ

pak-military2
ನವದೆಹಲಿ: ಭಾರತದ ಗಡಿಯಲ್ಲಿ ಪಾಕಿಸ್ಥಾನ ‘ರಾದ್ ಉಲ ಬರ್ಕ್’ ಸೇನಾ ಸಮರಾಭ್ಯಾಸ ನಡೆಸುತ್ತಿದೆ.

ಪಂಜಾಬ್ ಪ್ರಾಂತ್ಯದ ಭಾರತೀಯ ಗಡಿಯ ಭವಲ್ಪುರ್‌ನ ಖೈರ್ಪುರ್ ತಮಿವಾಲಿ ಪ್ರದೇಶದಲ್ಲಿ ಪಾಕಿಸ್ಥಾನ ಸೇನೆ ಸಮರಾಭ್ಯಾಸ ನಡೆಸುತ್ತಿದ್ದು, ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತು ಸೇನಾಪಡೆ ಮುಖ್ಯಸ್ಥ ರಹೀಲ್ ಶರೀಫ್ ಸಮರಾಭ್ಯಾಸವನ್ನು ವೀಕ್ಷಿಸಿರುವುದಾಗಿ ಮೂಲಗಳು ತಿಳಿಸಿವೆ.

‘ರಾದ್ ಉಲ್ ಬರ್ಕ್’ ಮಿಲಿಟರಿ ಕಾರ್ಯಾಚರಣೆಯ ಸನ್ನದ್ಧತೆ ಪರೀಕ್ಷಿಸಲು ನಡೆಸಲಾಗಿದೆ. ಸೇನಾ ಕಾರ್ಯಾಚರಣೆಯಲ್ಲಿ ಟ್ಯಾಂಕ್, ಯುದ್ಧ ವಿಮಾನಗಳು, ಫಿರಂಗಿಗಳು ಮತ್ತಿತರ ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂಉ ತಿಳಿದುಬಂದೆ.

ಭಾರತದ ತಂತ್ರಗಳಿಗೆ ಪಾಕಿಸ್ಥಾನ ಜಗ್ಗುವುದಿಲ್ಲ. ಪಾಕ್‌ನ ಸಂಯಮವನ್ನು ದೌರ್ಬಲ್ಯ ಎಂಬ ತಪು ಗ್ರಹಿಕೆ ಸಲ್ಲದು. ಪಾಕಿಸ್ಥಾನ ಯಾವುದೇ ಸಮಸ್ಯತೆ ಎದುರಿಸಲು ಸಿದ್ಧವಿದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು.

 

Recent News

Back To Top
error: Content is protected !!