ನವದೆಹಲಿ: ನೋಟು ನಿಷೇಧದಿಂದ ರೂ.500 ಮತ್ತು ರೂ.1000 ನೋಟುಗಳ ಠೇವಣಿ 3.75 ಲಕ್ಷ ಕೋಟಿ ತಲುಪಿದ್ದು, ನವೆಂಬರ್ 24ರ ವರೆಗೆ ಹಳೆ ನೋಟುಗಳ ಬದಲಾವಣೆಗೆ ಆಸ್ಪತ್ರೆ, ಪೆಟ್ರೋಲ್ ಬಂಕ್ಗಳಲ್ಲಿ ನೀಡಲಾದ ವಿನಾಯಿತಿ ಸ್ಥಗಿತಗೊಂಡ ಬಳಿಕ ಬ್ಯಾಂಕ್ಗಳಲ್ಲಿ ಠೇವಣಿ 10 ಲಕ್ಷ ಕೋಟಿ ತಲುಪಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.
ಒಂದು ವೇಳೆ ಈ ವಿನಾಯಿತಿ ವಿಸ್ತರಿಸಿದಲ್ಲಿ ಠೇವಣಿ 12 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಹಳೆ ನೋಟು ನಿಷೇಧದ 5 ದಿನಗಳಲ್ಲಿ ಬ್ಯಾಂಕ್ಗಳಲ್ಲಿ ಒಳಹರಿವು 3.75 ಲಕ್ಷ ಕೋಟಿ ತಲುಪಿದೆ. ಜನರ ವೈಯಕ್ತಿಕ ಖಾತೆಗಳ ಠೇವಣಿಯಿಂದ ಇದು 10-12 ಲಕ್ಷ ತಲುಪಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಪ್ಪು ಹಣ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನ.8ರಂದು ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ಬಳಕೆಯನ್ನು ನಿಷೇಧಿಸಿದ್ದರು.
ಒಟ್ಟು ಠೇವಣಿ ರೂ.18 ಲಕ್ಷ ಕೋಟಿ ಇದ್ದು, ಇದರಲ್ಲಿ ರೂ.500 ಮತ್ತು 1000 ನೋಟುಗಳ ಠೇವಣಿ ಶೇ.84-85 ಆಗಿದೆ. ಮಾರ್ಚ್-2017ರ ಅಂತ್ಯದಲ್ಲಿ ಇದು 16.6 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.