ಚಿಕ್ಕಮಗಳೂರು : ಪಶ್ಚಿಮ ಘಟ್ಟದಲ್ಲಿ ಕಳೆದ 20 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದ 4 ನಕ್ಸಲರು ಚಿಕ್ಕಮಗಳೂರಿನಲ್ಲಿ ಶರಣಾಗಿದ್ದಾರೆ.
ಮಾವೋವಾದಿ ಸಿಪಿಐ ಸಂಘಟನೆಯ ನಾಲ್ವರು ನಕ್ಸಲರಾದ ನೀಲ್ಗುಳಿ ಪದ್ಮನಾಭ್, ಭಾರತಿ, ರಿಜ್ವಾನ್ ಬೇಗಂ ಹಾಗೂ ರಾಜು ಈ ನಾಲ್ವರು ನಕ್ಸಲರು ಸೋಮವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಸತ್ಯವತಿ, ಎಡಪಂಥೀಯ ತೀವ್ರಗಾಮಿಗಳ ಶರಣಾಗತ ರಾಜ್ಯ ಸಮಿತಿ ಸದಸ್ಯೆ ಗೌರಿ ಲಂಕೇಶ್, ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾ ಮಲೈ, ವಕೀಲರಾದ ಎ. ಕೆ. ಸುಬ್ಬಯ್ಯ ಇನ್ನಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಇವರ ಶರಣಾಗತಿಯ ಪ್ರಸ್ತಾವನೆಯನ್ನು ರಾಜ್ಯ ಸಮಿತಿಗೆ ಕಳುಹಿಸಲಾಗುವುದು. ರಾಜ್ಯ ಸಮಿತಿ ಒಪ್ಪಿಗೆಯ ಮೇರೆಗೆ 4 ನಕ್ಸಲರು ಸಮಾಜದ ಮುಖ್ಯ ವಾಹಿನಿಗೆ ಬರಬಹುದು ಎನ್ನಲಾಗಿದೆ.
ರಾಜ್ಯ ಸರ್ಕಾರ ಈ ಹಿಂದೆ ನೀಲ್ಗುಳಿ ಪದ್ಮನಾಭ್, ಭಾರತಿ ಮತ್ತು ರಿಜ್ವಾನ್ ಬೇಗಂ ಅವರನ್ನು ಹುಡುಕಿಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಿತ್ತು.
ರಾಜ್ಯ ಸರ್ಕಾರವು 2010 ರಲ್ಲಿ ನಕ್ಸಲರಿಗೆ ಶರಣಾಗತಿಯ ಪ್ಯಾಕೇಜನ್ನು ಘೋಷಿಸಿತ್ತು. ಆದರೆ ಎಷ್ಟು ಪ್ರಯತ್ನಪಟ್ಟರೂ ಇದುವರೆಗೆ ಎಷ್ಟೋ ನಕ್ಸಲರನ್ನು ಮುಖ್ಯವಾಹಿನಿಗೆ ತರಲಾಗಲಿಲ್ಲ. 2014 ರಲ್ಲಿ ಸಿರಿಮನೆ ನಾಗರಾಜ್ ಹಾಗೂ ನೂರ್ ಅವರು ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಗೆ ಜೊತೆ ಸೇರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.