ಇಂಫಾಲ್ : ಮಣಿಪುರದ ಇಂಫಾಲ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ 6400 ಶ್ರವಣ ಸಾಧನಗಳನ್ನು ವಿತರಣೆ ಮಾಡುವ ಮೂಲಕ ಗಿನ್ನೆಸ್ ವರ್ಡ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಲಿದೆ ಎನ್ನಲಾಗಿದೆ.
ಈ ಕಾರ್ಯಕ್ರಮವನ್ನು ಇಂಫಾಲ್ನ ಖುಮಾನ್ ಲಂಪಕ್ ಒಳಾಂಗಣ ಕ್ರಿಡಾಂಗಣದಲ್ಲಿ, ಭಾರತದ ಕೃತಕ ಅಂಗಾಂಗ ತಯಾರಕ ನಿಗಮ ಮತ್ತು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದ ಸಹಯೋಗದೊಂದಿಗೆ ಕಿವುಡು ತಡೆ ಮತ್ತು ನಿಯಂತ್ರಣ, ರಾಷ್ಟ್ರೀಯ ಆರೋಗ್ಯ ನಿಯೋಗ ಮಣಿಪುರ ಇವುಗಳೊಂದಿಗೆ ಜಂಟಿಯಾಗಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಯಶಸ್ವಿಗಾಗಿ ಸುಮಾರು 400 ಸ್ವಯಂಸೇವಕರು ಭಾಗಿಯಾಗಿದ್ದರು. ಇವರು ಸುಮಾರು 8 ಗಂಟೆಗಳ ಕಾಲ ಫಲಾನುಭವಿಗಳಿಗೆ ಶ್ರವಣ ಸಾಧನಗಳನ್ನು ವಿತರಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ ಎನ್ನಲಾಗಿದೆ.
ಈ ಬೃಹತ್ ಕಾರ್ಯಕ್ರಮಕ್ಕೂ ಮುನ್ನ, ರಾಜ್ಯದ ವಿವಿಧೆಡೆ 49 ಪ್ರತ್ಯೇಕವಾರು ಶಿಬಿರಗಳನ್ನು ನಡೆಸಿ ಸುಮಾರು 12,000 ಜನರನ್ನು ತಪಾಸಣೆ ಮಾಡಿ ಅವರಲ್ಲಿ ಒಟ್ಟು 6400 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಶ್ರವಣ ಸಾಧನಗಳ ಒಟ್ಟು ವೆಚ್ಚ 6.50 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
’ರಾಷ್ಟ್ರೀಯ ಆರೋಗ್ಯ ನಿಗಮದ ಅಡಿಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಕಿವುಡು ತಪಾಸಣೆ ಹಾಗೂ ಶ್ರವಣ ಸಾಧನ ಅಳವಡಿಸಲಾಯಿತು. ರಾಜ್ಯದ ವಿವಿಧೆಡೆ ನಡೆಸಿದ 49 ಪ್ರತ್ಯೇಕವಾರು ಶಿಬಿರಗಳಲ್ಲಿ ಸುಮಾರು 12000 ಜನರನ್ನು ತಪಾಸಣೆ ಮಾಡಿದೆವು. ಅದರಲ್ಲಿ ಒಟ್ಟು 6400 ಫಲಾನುಭವಿಗಳನ್ನು ಗುರುತಿಸಿ ಅವರೆಲ್ಲರಿಗೂ ಶ್ರವಣ ಸಾಧನದ ಅವಶ್ಯಕತೆ ಇರುವುದಾಗಿ ಮನಗಂಡೆವು. ಶ್ರವಣ ಸಾಧನ ವಿತರಣೆಯನ್ನು ಮಾಡಲು ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದೇ ಉತ್ತಮವೆಂದು ಭಾವಿಸಿದೆವು. ನನಗೆ ಗೊತ್ತಿರುವಂತೆ ಗುಜರಾತ್ ರಾಜ್ಯವು 8 ಗಂಟೆಗಳಲ್ಲಿ 600 ರೋಗಿಗಳಿಗೆ ಶ್ರವಣ ಸಾಧನ ವಿರಣೆ ಮಾಡಿದ ದಾಖಲೆಯನ್ನು ಹೊಂದಿದೆ, ನಾವು ಇಂದು ಆ ದಾಖಲೆ ಮುರಿದು ಹೊಸ ದಾಖಲೆ ಮಾಡಿದ್ದೇವೆ’ ಎಂದು ರಾಜ್ಯ ಆರೋಗ್ಯ ಸೇವಾ ಆಯುಕ್ತರಾದ ಪಿ.ಕೆ. ಸಿಂಗ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಶ್ರವಣ ಸಾಧನ ಜೊತೆಗೆ ಮೂರು ವರ್ಷ ಬಾಳಿಕೆ ಬರುವ ಬ್ಯಾಟರಿಯನ್ನು ನೀಡಲಾಗಿದೆ.
’ನನಗೆ ಸುಮಾರು 15-16 ವರ್ಷಗಳಿಂದ ಕೇಳಲು ತೊಂದರೆಯಾಗುತ್ತಿತ್ತು, ಆದರೆ ಶ್ರವಣ ಸಾಧನ ಅಳವಡಿಸಿಕೊಂಡ ಮೇಲೆ ನನಗೆ ಸರಿಯಾಗಿ ಕೇಳಲು ಸಾಧ್ಯವಾಗುತ್ತಿದೆ’ ಎಂದು ಕಾರ್ಯಕ್ರಮದ ಫಲಾನುಭವಿ ಬೀನಾ ಹೇಳಿದ್ದಾರೆ.
ಒಟ್ಟು 36 ಕ್ಯಾಮರಾಗಳು ಈ ಕಾರ್ಯಕ್ರಮವನ್ನು ಸೆರೆಹಿಡಿದಿದ್ದು, ಲಂಡನ್ನಲ್ಲಿರುವ ಗಿನ್ನೆಸ್ ಕಾರ್ಯಾಲಕ್ಕೆ ನೇರಪ್ರಸಾರವನ್ನು ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.