ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿನ್ಝೋ ಅಬೆ ಅವರು ಗುಜರಾತ್ ಸರ್ಕಾರ ಮತ್ತು ಹ್ಯೋಗೊ ಗವರ್ನರ್ ನಡುವಿನ ಸಹಕಾರ ಒಪ್ಪಂದಕ್ಕೆ ಸಾಕ್ಷಿಯಾದ್ದಾರೆ.
ಪ್ರಧಾನಿ ಮೋದಿ, ಅಬೆ, ಹ್ಯೋಗೊ ಗವರ್ನರ್ ಹಾಗೂ ಕೊಬೆ ಮೇಯರ್ ಅವರು ಸಭೆ ನಡೆಸಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ಸಹಕಾರ ಒಪ್ಪಂದ ಜನರ ನಡುವಿನ ಸಂಪರ್ಕ, ವ್ಯಾಪಾರ ಮತ್ತು ಹೂಡಿಕೆ ಒಪ್ಪಂದ, ವಿಪತ್ತು ಚೇತರಿಕೆ ಪ್ರದೇಶ ನಿರ್ಮಾಣ, ಆಹಾರ ಮತ್ತು ಕೃಷಿ ಕಾರ್ಯನಿರ್ವಹಣೆ, ವೈಯಕ್ತಿಕ ಮತ್ತು ಬೌದ್ಧಿಕ ವಿಚಾರಗಳ ವಿನಿಮಯ ಮುಂತಾದ ವಿಚಾರಗಳ ಮೇಲೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ನಮ್ಮ ಸಂಬಂಧಗಳು ಸಂಪೂರ್ಣ ವಿಶ್ವಾಸ ಮತ್ತು ಪರಸ್ಪರ ನಂಬಿಕೆಯಿಂದ ಕೂಡಿದೆ. ಗುಜರಾತ್ ಜೊತೆ ಸಂಬಂಧ ಅಭಿವೃದ್ಧಿಯ ಪ್ರಯತ್ನಗಳಿಗೆ ಗವರ್ನರ್ ಇಡೋ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಹ್ಯೋಗೊದಲ್ಲಿ ಕೈಗಾರಿಕೆಗಳ ಹೆಚ್ಚಿನ ಭಾಗವಹಿಸುವಿಕೆ ಮತ್ತು ತೊಡಗಿಸುವಿಕೆಯಿಂದ ಜಪಾನ್ ಮತ್ತು ಭಾರತದ ಎಂಎಸ್ಎಂಇ ಸೆಕ್ಟರ್ಗೆ ಲಾಭದಾಯಕವಾಗಲಿದೆ ಎಂದು ಈ ವೇಳೆ ಮೋದಿ ಹೇಳಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಹಾಗೂ ಶಿನ್ಝೋ ಅಬೆ ಅವರು ಕೊಬೆ ಪ್ರಾಂತ್ಯಕ್ಕೆ ಆಗಮಿಸಿದ್ದು, ಅವರನ್ನು ಹ್ಯೋಗೊ ಗವರ್ನರ್ ಟೊಶಿಝೋ ಇಡೋ ಹಾಗೂ ಕೊಬೆ ಮೇಯರ್ ಕ್ಯೂಝೋ ಹಿಸಾವೋಮೊಟೊ ಸ್ವಾಗತಿಸಿದರು.
ಅಲ್ಲಿಯ ಭಾರತೀಯ ವಿದ್ಯಾರ್ಥಿಗಳು ಭಾರತದ ಧ್ವಜ ಹಾರಿಸುವ ಮೂಲಕ ಪ್ರಧಾನಿ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.