ಟೋಕಿಯೊ: ಮೂರು ದಿನಗಳ ಕಾಲ ಜಪಾನ್ ಭೇಟಿಯಲ್ಲಿರುವ ಭಾರತದ ಪ್ರಧಾನಿ ಮೋದಿಯವರು ಟೋಕಿಯೋದಲ್ಲಿ ಜಪಾನ್ನ ವ್ಯಾಪಾರಸ್ಥರ ಸಭೆಯಲ್ಲಿ ಭಾಗವಹಿಸಿ, ಭಾರತವನ್ನು ಮುಕ್ತ ಆರ್ಥಿಕತೆಯ ರಾಷ್ಟ್ರವನ್ನಾಗಿಸಲು ಕರೆ ನೀಡಿದ್ದಾರೆ.
ಟೋಕಿಯೋದಲ್ಲಿ CII-KEIDANREN business luncheon – ಭಾರತ ಮತ್ತು ಜಪಾನ್ನ ಪ್ರತಿಷ್ಠಿತ ವ್ಯಾಪಾರಸ್ಥರ, ಮುಖ್ಯಸ್ಥರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತವು ವಿಶ್ವದ ಮುಕ್ತ ಆರ್ಥಿಕ ದೇಶವಾಗಬೇಕು. ಭಾರತದ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಜಪಾನ್ ದೇಶವು ಪ್ರಮುಖ ಪಾತ್ರವನ್ನು ಹೊಂದಿದೆ. ವೇಗ ಮತ್ತು ಪ್ರಮಾಣಗಳಿಗನುಗುಣವಾಗಿ ಮೆಗಾ ಪ್ರಾಜೆಕ್ಟ್ಗಳಲ್ಲಿ ಭಾಗವಹಿಸುವಿಕೆ ಅಗತ್ಯ. ಕಾರ್ಮಿಕ ವೆಚ್ಚ ಕಡಿಮೆ ಇದ್ದು, ದೊಡ್ಡ ದೇಶೀಯ ಮಾರಕಟ್ಟೆ ಮತ್ತು ಆರ್ಥಿಕ ಸ್ಥಿರತೆ ಹೊಂದುವ ಮೂಲಕ ಭಾರತವು ಹೂಡಿಕೆ ಮಾಡಲು ಆರ್ಕಷಕ ದೇಶವಾಗಿದೆ.
‘ಮೇಡ್ ಇನ್ ಇಂಡಿಯಾ’ ಮತ್ತು ‘ಮೇಡ್ ಬೈ ಜಪಾನ್’ ಒಗ್ಗೂಡಿಕೆಯಿಂದ ಅದ್ಭುತ ಆರಂಭವಾಗಿದೆ. ಎಫ್ಡಿಐ ಮತ್ತು ಇತರ ಕ್ಷೇತ್ರಗಳ ಮೂಲಗಳಿಂದಾಗಿ ಜಪಾನ್ 4 ನೇ ಸ್ಥಾನದಲ್ಲಿದೆ. ಭಾರತವು 2015 ರಲ್ಲಿ ಭಾರತದ ಆರ್ಥಿಕತೆಯೂ ಹೆಚ್ಚಾಗಿದೆ. ಏಷ್ಯಾದ ಆರ್ಥಿಕತೆ ಹೆಚ್ಚಲು ಭಾರತ ಮತ್ತು ಜಪಾನ್ ಎರಡೂ ದೇಶಗಳು ಒಟ್ಟಾಗಿ ಪ್ರಮುಖ ಪಾತ್ರ ನಿರ್ವಹಿಸಲಿವೆ. ಸ್ಪರ್ಧಾತ್ಮಕ ಉತ್ಪಾದನೆ, ಮಾರುಕಟ್ಟೆ ವಿಸ್ತರಣೆಗಳ ಮೂಲಕ ಏಷ್ಯಾ ಜಾಗತಿಕ ಬೆಳವಣಿಗೆ ಕೇಂದ್ರವಾಗಿದೆ.
‘ಮೇಡ್ ಇನ್ ಇಂಡಿಯಾ’ ನೀತಿಗಳ ನೆರವಿಗೆ ಬದ್ಧವಾಗಿದ್ದು ಇನ್ನಷ್ಟು ವೃದ್ಧಿಸಲು ಸರ್ಕಾರ ಪಾರದರ್ಶಕ ಹಾಗೂ ಸ್ಥಿರ ಪ್ರಕ್ರಿಯೆಗಳನ್ನು ರಚಿಸಲಿದೆ. ಜಪಾನಿನ ಯಂತ್ರಾಂಶವು(ಹಾರ್ಡವೇರ್) ಭಾರತದ ತಂತ್ರಾಂಶಕ್ಕೆ(ಸಾಫ್ಟವೇರ್) ಪೂರಕವಾಗಿದೆ. ಇದು ಭವಿಷ್ಯದಲ್ಲಿ ನಮ್ಮ ಅಭಿವೃದ್ಧಿ ಹಾಗೂ ಕ್ಷಿಪ್ರ ಸಾಧನೆಗೆ ಸಹಾಯವಾಗಲಿದೆ. ಜಪಾನ್ ತಂತ್ರಜ್ಞಾನ ಹಾಗೂ ಅನುಭವವನ್ನು ಭಾರತದೊಂದಿಗೆ ಹಂಚಿಕೊಳ್ಳಲು ಅವರನ್ನು ಆಹ್ವಾನಿಸಿ, ಭಾರತದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡಲು ಮೋದಿ ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.