ವಾಷಿಂಗ್ಟನ್ : ರಿಪಬ್ಲಿಕನ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಡೊನಾಲ್ಡ್ ಟ್ರಂಪ್ (276 ಮತ)ಗಳನ್ನು ಪಡೆಯುವ ಮೂಲಕ ಇದೀಗ ಅಮೇರಿಕಾದ ನೂತನ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.
ಕೆಲ ತಿಂಗಳಿನಿಂದ ಕುತೂಹಲ ಮೂಡಿಸಿದ್ದ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ನಡೆದ ಸಾರ್ವತ್ರಿಕ ಚುನಾವಣೆ ಇಂದು ಕೊನೆಗೊಂಡಿದ್ದು, ಚುನಾವಣಾ ಯುದ್ಧಭೂಮಿಯಲ್ಲಿ ಡೆಮೊಕ್ರೆಟಿಕ್ ಪಕ್ಷದಿಂದ ಸ್ಫರ್ಧಿಸಿದ್ದ ಹಿಲರಿ ಕ್ಲಿಂಟನ್ (218 ಮತ) ಅವರನ್ನು ಸೋಲಿಸಿ ಟ್ರಂಪ್ ಅಮೇರಿಕದ 45 ನೇ ಅಧ್ಯಕ್ಷರಾಗಿದ್ದಾರೆ.
ಟ್ರಂಪ್ಗೆ ಗೆಲ್ಲಲು ಬೇಕಾಗಿದ್ದ 270 ಮತಗಳಿಗೆ, ಕೇವಲ 16 ಮತಗಳ ಅಭಾವವಿತ್ತು. ಚುನಾವಣೆ ದಿನದ ರಾತ್ರಿ ವೇಳೆಯಲ್ಲಿ ಟ್ರಂಪ್ ಗಳಿಸುತ್ತಿರುವ ಮತಗಳಲ್ಲಿ ಅಭಾವವಿದ್ದರೂ, ಪ್ರಮುಖ ರಾಜ್ಯಗಳಾದ ಓಹಿಯೊ, ಫ್ಲೋರಿಡಾ ಮತ್ತು ಉತ್ತರ ಕೆರೊಲಿನಾ ರಾಜ್ಯಗಳಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರಿಂದ ಕ್ಲಿಂಟನ್ ಅವರನ್ನು ಸೋಲಿಸಲು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ. ಟ್ರಂಪ್ ಅವರು 23 ರಾಜ್ಯಗಳಲ್ಲಿ ಗೆದ್ದಿದ್ದರೆ, ಹಿಲರಿ 13 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಹಿಲರಿ ಕ್ಲಿಂಟನ್ ‘ತಮ್ಮ ತಂಡದ ಬಗ್ಗೆ ತುಂಬಾ ಹೆಮ್ಮೆ ಇದೆ. ಇವತ್ತಿನ ರಾತ್ರಿ ಏನೇ ಆಗಲಿ, ಎಲ್ಲದಕ್ಕೂ ಧನ್ಯವಾದಗಳು’ ಎಂದು ಟ್ವೀಟಿಸಿದ್ದಾರೆ.
‘ಈ ಗೆಲುವಿನ ನಂತರ, ಅಮೇರಿಕವು ಜಗತ್ತಿನ ಬಲಿಷ್ಠ ರಾಷ್ಟ್ರ ಹಾಗೂ ದೇಶದ ಅಭಿವೃದ್ಧಿ ಇಮ್ಮಡಿಯಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಜನವರಿ 20, 2017 ರಂದು ಅಮೇರಿಕಾದ 45 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಅಧ್ಯಕ್ಷೀಯ ಚುನಾವಣೆ ಹಿನ್ನಲೆ ಡೊನಾಲ್ಡ್ ಟ್ರಂಪ್ ನಡೆಸಿದ್ದ ಪ್ರಚಾರ ಸಭೆಯೊಂದರಲ್ಲಿ, ನಾನು ಮೋದಿಯವರ ದೊಡ್ಡ ಅಭಿಮಾನಿ ಮತ್ತು ಹಿಂದೂಗಳ ಪರ ನನಗೆ ಅತೀವ ಗೌರವವಿದೆ ಎಂದು ಹೇಳಿದ್ದರು.
ಟ್ರಂಪ್ ಗೆಲುವು ಭಾರತಕ್ಕೂ ಪೂರಕವಾಗೇ ಆಗಿದೆ. ಭಯೋತ್ಪಾದನೆಯ ವಿರುದ್ಧ ಟ್ರಂಪ್ ಕೂಡಾ ಸಮರ ಸಾರುವೆ ಎಂದು ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.