ಧಾಕಾ: ಯುವಕರು ತಮ್ಮಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಬಳಸಿ ಸ್ವಂತ ಹಾಗೂ ದೇಶದ ಅಭಿವೃದ್ದಿಗೆ ಮುಂದಾಗಬೇಕು ಎಂದು ಹೇಳಿದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಯುವ ಜನಾಂಗ ಮಾದಕ ದ್ರವ್ಯ ಸೇವನೆ ಮತ್ತು ಭಯೋತ್ಪಾದನೆಯಿಂದ ದೂರ ಉಳಿಯಬೇಕು ಎಂದು ಹೇಳಿದ್ದಾರೆ.
ನಮ್ಮ ದೇಶ ಒಟ್ಟು ಜನಸಂಖ್ಯೆಯ ಮೂರನೇ ಒಂದರಷ್ಟು ಯುವಕರನ್ನು ಹೊಂದಿದ್ದು, ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಯುವ ಜನಾಂಗದ ಸಂಖ್ಯೆ ಹೆಚ್ಚಿದೆ. ಈ ಲಾಭ ಇತರ ರಾಷ್ಟ್ರಗಳು ಪಡೆದಿಲ್ಲ. ಆದ್ದರಿಂದ ದೇಶದ ಅಭಿವೃದ್ಧಿಯ ಕುರಿತು ಹೊಸ ಕನಸುಗಳನ್ನು ಕಾಣುತ್ತಿದ್ದೇವೆ ಎಂದು ಶೇಖ್ ಹಸೀನಾ ಹೇಳಿರುವುದಾಗಿ ಧಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಧಾಕಾದ ಓಸ್ಮಾನಿ ಮೆಮೋರಿಯಲ್ ಸಭಾಂಗಣದಲ್ಲಿ ‘ರಾಷ್ಟ್ರೀಯ ಯುವ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಯುವ ಶಕ್ತಿಗಳು ಅಡ್ಡ ದಾರಿ ಹಿಡಿಯುವ ಮೂಲಕ ಪೋಷಕರಿಗೆ ನೋವುಂಟು ಮಾಡುವ ಘಟನೆಗಳು ಆಗಬಾರದು ಎಂದು ಹೇಳಿದ್ದಾರೆ.
ಯುವ ಜನಾಂಗ ಭಯೋತ್ಪಾದನೆ, ಉಗ್ರವಾದದಿಂದ ದೂರ ಉಳಿಯಬೇಕು. ಏಕೆಂದರೆ ಅವು ಉತ್ತಮ ಜೀವನಕ್ಕೆ ತಪ್ಪು ದಾರಿಗಳಾಗಿವೆ. ಇದು ಅವರ ಕುಟುಂಬಗಳು ಮತ್ತು ರಾಷ್ಟ್ರಕ್ಕೆ ಯಾವುದೇ ಒಳಿತನ್ನು ಮಾಡದು. ಧಾರ್ಮಿಕ ಮತಾಂಧತೆಯಿಂದ ಇತರರ ಪ್ರಾಣ ತೆಗೆದಲ್ಲಿ ಯಾವುದೇ ಪುಣ್ಯ ದೊರಕದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.