ವಿಗಾನ್: ಉತ್ತರ ಫಿಲಿಪೈನ್ಸ್ನಲ್ಲಿ ಕಳೆದ ರಾತ್ರಿ ಸಂಭಿಸಿದ ಭಯಾನಕ ‘ಹೈಮಾ’ ಚಂಡಮಾರುತ ಮತ್ತು ಭಾರೀ ಮಳೆಗೆ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಪಟ್ಟಣಗಳಲ್ಲಿ ಪ್ರವಾಹ ಕೂಡ ಸಂಭವಿಸಿದ್ದು, ಸಾವಿರಾರು ಮಂದಿ ಪಲಾಯನ ಮಾಡಿರುವುದಾಗಿ ತಿಳಿದು ಬಂದಿದೆ.
ಹೈಮಾ ಚಂಡಮಾರುತ ಜನರಲ್ಲಿ 2013ರಲ್ಲಿ ಸಂಭವಿಸಿದ ಹೈಯಾನ್ ಚಂಡಮಾರುತದ ದುರಂತದ ನೆನಪು ಮತ್ತು ಭಯ ಹುಟ್ಟಿಸಿದ್ದರು ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ. ಆದರೆ ಹಲವು ಗ್ರಾಮಗಳಲ್ಲಿ ಸಂವಹನದ ಸಮಸ್ಯೆ ಉಂಟಾಗಿದೆ. ಭೂಕುಸಿತ, ಪ್ರವಾಹದಿಂದಾಗಿ ಮರಗಳು ಬಿದ್ದಿದ್ದು, ಸರ್ಕಾರದ ಸಹಾಯಕ ತಂಡಗಳು ಹಾಗೂ ರಕ್ಷಣಾ ಕಾರ್ಯಾಚರಣೆ ತಂಡಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಅಪಾಯವನ್ನು ತಡೆಗಟ್ಟಲು ಸುಮಾರು 1 ಲಕ್ಷ ನಾಗರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಗಂಟೆಗೆ ಸುಮಾರು 150ರಿಂದ 185 ಕಿ.ಮೀ. ವೇಗದಲ್ಲಿ ಚಲಿ ಸುವ ಪ್ಯಾಸಿಫಿಕ್ ಚಂಡಮಾರುತ, ಫಿಲಿಪೈನ್ಸ್ನ ಈಶಾನ್ಯ ಕಾಗಯನ್ ಕಡಲ ತೀರಕ್ಕೆ ಅಪ್ಪಳಿಸಿದ್ದು, ನಂತರ ದಕ್ಷಿಣ ಚೀನಾ ಸಮುದ್ರದತ್ತ ಸಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.