ನ್ಯೂಯಾರ್ಕ್: ಭಾರತೀಯ ಮೂಲದ ಅಮೇರಿಕನ್ನರು ಹಾಗೂ ಅಮೇರಿಕಾದ ಶಾಸಕರ ಏಳು ವರ್ಷಗಳ ಪ್ರಯತ್ನವಾಗಿ ಅಮೇರಿಕಾದ ಅಂಚೆ ಸೇವೆ ಬೆಳಕಿನ ಹಬ್ಬವನ್ನು ಗುರುತಿಸಲು ದೀಪಾವಳಿ ಸ್ಟ್ಯಾಂಪ್ ಬಿಡುಗಡೆ ಮಾಡಿದೆ.
ದೀಪಾವಳಿ ಸ್ಟ್ಯಾಂಪ್ನ್ನು ಭಾರತೀಯ ದೂತಾವಾಸ ಕಚೇರಿಯಲ್ಲಿ ‘ಫಸ್ಟ್ ಡೇ ಆಫ್ ಇಷ್ಯೂ’ ಸಮಾರಂಭದಲ್ಲಿ ಅನಾವರಣಗೊಳಿಸಲಾಗಿದೆ.
ಭಾರತದ ಹಿಂದೂ ಹಬ್ಬವನ್ನು ಗುರುತಿಸುವ ಸಲುವಾಗಿ ಸ್ಟ್ಯಾಂಪ್ ಬಿಡುಗಡೆ ಮಾಡಲಾಗಿದ್ದು, ಇದು ಒಂದು ಸಾಂಪ್ರದಾಯಿಕ ‘ದಿಯಾ’, ಹಿಂಭಾಗದಲ್ಲಿ ಬಂಗಾರದ ಬಣ್ಣದ ಹಿನ್ನೆಲೆ, ಹಾಗೂ ‘ಫಾರೆವೆರ್ ಯುಎಸ್ಎ 2016’ ಎಂಬ ಪದಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.