ಬಾಗ್ದಾದ್ : ಇಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯ ಊಟದಲ್ಲಿ ವಿಷ ಬೆರೆಸಿ ಆತನನ್ನು ಕೊಲ್ಲಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಗುಪ್ತಚರ ಮೂಲಗಳ ಪ್ರಕಾರ ಬಾಗ್ದಾರಿ ಆಪ್ತರು ಆತನ ಊಟಕ್ಕೆ ವಿಷ ಬೆರೆಸಿ ಕೊಲ್ಲಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಇದೀಗ ಬಾಗ್ದಾರಿ ಪರಿಸ್ಥಿತಿ ಗಂಭೀರವಾಗಿದ್ದು ನೈನ್ ವೇ ಪ್ರಾಂತ್ಯದಲ್ಲಿರುವ ಬೀಅಜ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಬಾಗ್ದಾದಿ ಊಟದಲ್ಲಿ ವಿಷ ನೀಡಿ ಆತನನ್ನು ಕೊಲ್ಲಲು ಯತ್ನಿಸಿರುವ ವ್ಯಕ್ತಿ ಯಾರು ಎಂಬುದನ್ನು ಕಂಡು ಹಿಡಿಯಲು ಇಸಿಸ್ ಸಂಘಟನೆಯ ಮುಖ್ಯಸ್ಥರು ಸಂಘಟನೆಯಲ್ಲಿರುವ ಕೆಲ ಶಂಕಿತರನ್ನು ಗುರುತಿಸಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಅಮೇರಿಕಾದ ಚಾಲಕ ರಹಿತ ಯುದ್ಧ ವಿಮಾನ ಡ್ರೋನ್ ದಾಳಿಯಲ್ಲಿ ಬಾಗ್ದಾರಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಹರಡಿತ್ತು. ಆದರೆ ಇದೀಗ ವಿಷ ಬೆರೆಸಿರುವ ಸುದ್ದಿ ಪ್ರಕಟವಾಗಿ ಬಾಗ್ದಾದಿ ಬದುಕಿದ್ದ ಎನ್ನುವುದು ಸ್ಪಷ್ಟವಾಗಿದೆ. ಆದರೆ ಇದೀಗ ಸಂಘಟನೆಯಲ್ಲಿರುವ ಆತನ ಆಪ್ತರಿಂದಲೇ ಆತ ಮೃತ್ಯಕೂಪಕ್ಕೆ ತಳ್ಳಲ್ಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.