ವಾಷಿಂಗ್ಟನ್ : ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಬೇಕೆಂಬ ಆನ್ಲೈನ್ ಅರ್ಜಿಯನ್ನು ಅಮೇರಿಕಾ ಆರ್ಕೈವ್ಗೆ ಸೇರಿಸಿದೆ. ಇದರಿಂದಾಗಿ ಎಲ್ಲರಲ್ಲೂ ಅಚ್ಚರಿ ಮೂಡಿದೆ.
ವಿಶ್ವದಾದ್ಯಂತ ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲು ಆಗ್ರಹಿಸಿದರೂ, ಅಮೇರಿಕಾ ಮಾತ್ರ ತನ್ನ ದ್ವಂದ್ವ ನಿಲುವನ್ನು ಪ್ರದರ್ಶಿಸಿದೆ. ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ ಶ್ವೇತ ಭವನದ ವೆಬ್ಸೈಟ್ ಪ್ರಾರಂಭಿಸಿದ್ದ ಆನ್ಲೈನ್ ಅರ್ಜಿಯನ್ನು ಹಠಾತ್ತಾಗಿ ಆರ್ಕೈವ್ಗೆ ಸೇರಿಸಿದೆ. ಇದು ಪಾಕಿಸ್ಥಾನದ ವಿರುದ್ಧ ಕಠಿಣ ನಿಲುವು ತಳೆದಿರುವಂತೆ ಪ್ರದರ್ಶಿಸುತ್ತಿದ್ದ ಅಮೇರಿಕಾದ ನಿಜ ಬಣ್ಣವನ್ನು ತೋರಿಸುವಂತೆ ಮಾಡಿದೆ !
ಪಾಕ್ ವಿರುದ್ಧದ ಆನ್ಲೈನ್ ಅರ್ಜಿಯನ್ನು ಆರ್ಕೈವ್ಗೆ ತಳ್ಳಲು ಕೊಟ್ಟಿರುವ ಕಾರಣವನ್ನು ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅಮೇರಿಕಾ ಕೊಟ್ಟ ಕಾರಣವೇನೆಂದರೆ, ಆನ್ಲೈನ್ ಅರ್ಜಿಗೆ ಕನಿಷ್ಠ ಸಂಖ್ಯೆಯ ಸಹಿ ಬಂದಿಲ್ಲ, ಹೀಗಾಗಿ ಇದನ್ನು ಆರ್ಕೈವ್ಗೆ ಸೇರಿಸಲಾಗಿದೆ ಎಂದು ಹೇಳಿ ಅದರ ನಿಜ ಬಣ್ಣ ಬಯಲು ಮಾಡಿದಂತಾಗಿದೆ.
ಸೆಪ್ಟೆಂಬರ್ 21 ರಂದು ಪ್ರಾರಂಭವಾಗಿದ್ದ ಆನ್ಲೈನ್ ಅರ್ಜಿಯು ಕೇವಲ 6 ದಿನಗಳಲ್ಲೇ ಒಂದು ಲಕ್ಷ ಸಹಿಯನ್ನು ದಾಖಲಿಸಿತ್ತು. ತದನಂತರ ಸುಮಾರು ಅರ್ಧ ಮಿಲಿಯನ್ನಷ್ಟು ಸಹಿಗಳನ್ನು ಪಡೆದು ಗಡುವು ಮುಕ್ತಾಯವಾಗುವ ಮೊದಲೇ ಅತಿ ಹೆಚ್ಚು ಸಹಿಗಳನ್ನು ಪಡೆದಿತ್ತು. ಇದು ಅಮೇರಿಕಾ ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲು ಬೇಕಾದಷ್ಟು ಆಗಿತ್ತು. ಆದರೆ ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ ಎಂದು ಪ್ರಕಟಿಸಲು ದ್ವಂದ್ವ ನಿಲುವನ್ನು ತಳೆದ ಅಮೇರಿಕಾ ಅಕ್ಟೋಬರ್ 3 ರಂದು ಆನ್ಲೈನ್ ಅರ್ಜಿಯನ್ನು ಆರ್ಕೈವ್ಗೆ ಸೇರಿಸಿ, ಕನಿಷ್ಠ ಸಹಿಗಳೂ ಬರದಿರುವ ಹಿನ್ನಲೆಯಲ್ಲಿ ಇದನ್ನು ಇಲ್ಲಿಗೆ ಮುಕ್ತಾಯಗೊಳಿಸಲಾಗಿದೆ ಎಂಬ ಹೇಳಿಕೆಯನ್ನು ನೀಡಿದೆ.
ಒಟ್ಟಿನಲ್ಲಿ ಅಮೇರಿಕಾ ಪಾಕಿಸ್ಥಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಲ್ಲಿ ತನ್ನ ದ್ವಂದ್ವ ನಿಲುವನ್ನು ವ್ಯಕ್ತಪಡಿಸಿ ಅದರ ನಿಜ ಬಣ್ಣ ಬಯಲು ಮಾಡಿದಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.