ನವದೆಹಲಿ: ಗೂಗಲ್ ಭಾರತದಲ್ಲಿ ಮಂಗಳವಾರ ಗೂಗಲ್ ಸ್ಟೇಷನ್ ಬಿಡುಗಡೆ ಮಾಡಿದೆ. ಈ ಸೇವೆಯ ಮೂಲಕ ಅತೀ ಹೆಚ್ಚು ಜನರನ್ನು ಗೂಗಲ್ ವೇದಿಕೆಗೆ ತರುವ ಉದ್ದೇಶ ಹೊಂದಿದೆ.
ಗೂಗಲ್ ಸ್ಟೇಷನ್ ಸೇವೆಯ ಅಡಿಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಾದ ಮಾಲ್ಗಳು, ಸಾರಿಗೆ ನಿಲ್ದಾಣಗಳು, ಕೆಫೆಗಳು, ವಿಶ್ವವಿದ್ಯಾಲಯಗಳು, ಸಾಮಾಜಿಕ ಹ್ಯಾಂಗೌಟ್ ಸ್ಥಳಗಳು ಮತ್ತಿತರ ಪ್ರದೇಶಗಳಲ್ಲಿ ವೈ-ಫೈ ಹಾಟ್ಸ್ಪಾಟ್ ಜಾರಿಗೆ ತರುವುದಾಗಿ ಗೂಗಲ್ ಹೇಳಿದೆ.
ಸರಳ ಲಾಗಿನ್ ಪ್ರಕ್ರಿಯೆಯೊಂದಿಗೆ ವಿಶ್ವವಿದ್ಯಾಲಯಗಳು, ಕೆಲಸ ನಿರ್ವಹಿಸುವ ಪ್ರದೇಶಗಳಲ್ಲಿ ಹಾಟ್ಸ್ಪಟ್ ಒದಗಿಸುವುದು ಗೂಗಲ್ನ ಉದ್ದೇಶವಾಗಿದೆ ಎಂದು ಗೂಗಲ್ನ ನೆಕ್ಸ್ಟ್ ಬಿಲಿಯನ್ ಯೂಸರ್ಸ್ನ ಉಪಾಧ್ಯಕ್ಷ ಸೀಸರ್ ಸೇನ್ಗುಪ್ತ ಹೇಳಿದ್ದಾರೆ.
ಜೊತೆಗೆ ೨ಜಿ ಅಥವಾ ಕಡಿಮೆ ಇಂಟರ್ನೆಟ್ ಸ್ಪೀಡ್ ಇರುವ ಪ್ರದೇಶಗಳಲ್ಲೂ ಗೂಗಲ್ ಕ್ರೋಮ್ ಸಹಾಯದಿಂದ ಮ್ಯೂಸಿಕ್, ವೀಡಿಯೋಗಳನ್ನು ಡೌನ್ಲೋಡ್ ಮಾಡಲು ಕೆಲವು ನೂತನ ವೈಶಿಷ್ಟ್ಯಗಳನ್ನು ಆರಂಭಿಸಿಲಿದ್ದು, ಇದು ಕ್ರೋಮ್ ಬೀಟಾ ಚಾನೆಲ್ನಲ್ಲಿ ಲಭ್ಯವಿರಲಿದೆ. ಆಂಡ್ರಾಯ್ಡ್ನ ಕ್ರೋಮ್ ಡಾಟಾ ಸೇವರ್ ಮೂಲಕ ೨ಜಿ ಸ್ಪೀಡ್ನಲ್ಲೂ ವೀಡಿಯೋಗಳ ವೆಬ್ಪೇಜ್ ಸೇವ್ ಮಾಡಿ ನಂತರ ನೋಡಬಹುದು.
ಈಗಾಗಲೇ ಭಾರತದ 53 ರೈಲ್ವೆ ನಿಲ್ಧಾಣಗಳು ಉಚಿತ ವೈ-ಫೈ ಸೇವೆ ಹೊಂದಿದ್ದು, ಮುಂದಿನ ವರ್ಷ 100ಕ್ಕೆ ತಲುಪಲಿದೆ ಗೂಗಲ್.
ಇಂಡೋನೇಷ್ಯಾ ಹಾಗೂ ಫಿಲಿಪೈನ್ಸ್ನಲ್ಲೂ ಗೂಗಲ್ ಸ್ಟೇಷನ್ ಸ್ಥಾಪಿಸುವುದಾಗಿ ಗೂಗಲ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.