ನವದೆಹಲಿ: ಗೂಗಲ್ನ 18ನೇ ಜನ್ಮದಿನಕ್ಕೆ ವರ್ಣರಂಜಿತ ಡೂಡಲ್ ರಚಿಸಲಾಗಿದೆ. ಆದರೆ ಗೂಗಲ್ ಜನ್ಮದಿನವನ್ನು 6 ಇತರ ದಿನಗಳಲ್ಲೂ ಆಚರಿಸಲಾಗುತ್ತದೆ ಎನ್ನಲಾಗಿದೆ. ಇಂದಿನ ವರ್ಣರಂಜಿತ ಡೋಡಲ್ ವಿನ್ಯಾಸವನ್ನು ಗರ್ಬೆನ್ ಸ್ಟೀಂಕ್ಸ್ ರಚಿಸಿದ್ದಾರೆ.
ಈವರೆಗೆ ಸೆಪ್ಟೆಂಬರ್ 4, 7, 8, 26 ಮತ್ತು 27ರಂದು ಒಟ್ಟು 5 ಬಾರಿ ಗೂಗಲ್ ತನ್ನ ಜನ್ಮದಿನವನ್ನು ಆಚರಿಸಿದೆ.
ಈ ಡೂಡಲ್ ಗೂಗಲ್ನ ‘ಜಿ’ ಪದವನ್ನು ಒಂದು ಬಲೂನ್ ಊದಿದಂತೆ ತೋರಿಸುತ್ತದೆ. ಈ ಬಲೂನ್ ಗೂಗಲ್ ಪದವನ್ನು ಆಕಾಶಕ್ಕೆ ಒಯ್ಯುತ್ತಿದ್ದಂತೆ ಭಾಸವಾಗುತ್ತದೆ.
ಲ್ಯಾರಿ ಪೇಜ್ ಮತ್ತು ಸರ್ಜೀ ಬ್ರಿನ್ 1998ರಲ್ಲಿ ಗೂಗಲ್ ಕಂಡುಹಿಡಿದ್ದಿದ್ದರು. ಇದೀಗ ವಿಶ್ವದ ಅತೀ ದೊಡ್ಡ ಸರ್ಚ್ ಇಂಜಿನ್ ಆಗಿದೆ.
ಗೂಗಲ್ ತನ್ನ ಹೋಮ್ಪೇಜ್ನಲ್ಲಿ ಸೆಪ್ಟೆಂಬರ್ 27ರಂದು ಜನ್ಮದಿನವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಿದೆ.
ಆದರೆ ವಿಶೇಷವೆಂದರೆ ಗೂಗಲ್ ರಚನೆಯಾದ ದಿನ ಗೂಗಲ್ಗೂ ಖಚಿತವಾಗಿ ತಿಳಿದಿಲ್ಲ! ಗೂಗಲ್ ಈವರೆಗೆ ಸೆ. 27ರಂದು ಜನ್ಮದಿನವನ್ನು ಆಚರಿಸುತ್ತ ಬಂದಿದೆ. ಕಳೆದ ವರ್ಷ ಗೂಗಲ್ ತನ್ನ ಜನ್ಮ ದಿನವನ್ನು ಸೆ.26ರಂದು ಆಚರಿಸಿತ್ತು. 2003ರಲ್ಲಿ ಸೆ.8ರಂದು ಮತ್ತು 2004ರಲ್ಲಿ ತನ್ನ 6ನೇ ಜನ್ಮದಿವನ್ನು ಗೂಗಲ್ ಸೆ.7ರಂದು ಆಚರಿಸಿತ್ತು.
ಈ ದಿನಗಳ ಬಗ್ಗೆ ಯಾವುದೇ ಪ್ರಸ್ತುತ ಮಾಹಿತಿ ದೊರೆತಿಲ್ಲ. ಸೆಪ್ಟೆಂಬರ್ 4, 1998ರಂದು ತನ್ನ ಸಾಂಸ್ಥಿಕ ಹುಟ್ಟುಹಬ್ಬವಾಗಿ ಗೂಗಲ್ ಆಚರಿಸಿತ್ತು.
ಗೂಗಲ್ ನಾಲ್ಕು ವಿವಿಧ ದಿನಗಳಂದು ತನ್ನ ಜನ್ಮದಿನವನ್ನು ಆಚರಿಸಿದ್ದು, ತನ್ನೊಳಗೇ ಗೊಂದಲ ಮೂಡಿತ್ತು. ಕೊನೆಗೂ 2002ರಲ್ಲಿ ಡೂಡಲ್ನ ಮೊದಲ ಜನ್ಮದಿನವಾದ ಸೆ.27ರಂದು ಗೂಗಲ್ ಜನ್ಮದಿನವನ್ನೂ ಆಚರಿಸಲು ಅದು ತೀರ್ಮಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.