ಸಿಡ್ನಿ: ಆಸ್ಟ್ರಿಯನ್ ವಿಮಾನಯಾನ ಸಂಸ್ಥೆಯು ವಿಶ್ವದ ಅತಿ ಕಡಿಮೆ ಅವಧಿಯಲ್ಲಿ ಪ್ರಯಾಣಿಸುವ ವಿಮಾನಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ.
ಈ ವಿಮಾನವು 13 ಮೈಲು ದೂರವನ್ನು ಕೇವಲ 8 ನಿಮಿಷಗಳಲ್ಲೇ ಕ್ರಮಿಸಲಿದೆ. ಪೀಪಲ್ಸ್ ವೀನ್ನೆಲೈನ್ನ ತ್ವರಿತ ಪ್ರಯಾಣವು ವಿಮಾಯಾನದ ಮಾರಾಟ ಮಾಡುತ್ತಿದ್ದು, ಈ ವಿಮಾನವು ಸ್ವಿಜರ್ಲ್ಯಾಂಡ್ನ ಸೈಂಟ್ ಗ್ಯಾಲ್ಲೆನ್ನಿಂದ ಜರ್ಮನಿಯ ಫ್ರೆಡ್ರಿಚ್ಶಫೆನ್ಗೆ ಪ್ರಯಾಣಿಕರನ್ನು ಸಾಗಿಸಲಿದೆ.
ನವೆಂಬರ್ 2 ರಿಂದ 50 ಸೀಟುಗಳ ಎಂಬ್ರೇಸರ್ 145 ವಿಮಾನ ದಿನಕ್ಕೆ ಎರಡು ಬಾರಿ ಸಂಚರಿಸಲಿದ್ದು, 13 ಮೈಲು ದೂರದ ಪ್ರಯಾಣ ದರ 34 ಯೂರೋ (40 ಡಾಲರ್) ಇರಲಿದೆ. ವಾರದಲ್ಲಿ 10 ಬಾರಿ ಸಂಚರಿಸಲಿದೆ.
ಸದ್ಯ ಪ್ರಯಾಣಿಕರು ಸ್ವಿಜರ್ಲ್ಯಾಂಡ್ ಮತ್ತು ಜರ್ಮನಿ ನಡುವೆ 77 ಕಿ.ಮೀ. (47 ಮೈಲು) ದೂರವನ್ನು 1 ಗಂಟೆಯಲ್ಲಿ ಪ್ರಯಾಣಿಸುತ್ತಿದ್ದಾರೆ.
ಸೈಂಟ್ ಗ್ಯಾಲೆನ್ ಮತ್ತು ಫ್ರೆಡ್ರಿಚ್ಶಫೆನ್ ನಡುವೆ ದೋಣಿ ವ್ಯವಸ್ಥೆ ಕೂಡ ಲಭ್ಯವಿದ್ದು, ಇದು 1 ಗಂಟೆ 20 ನಿಮಿಷಗಳಲ್ಲಿ ತಲುಪಲಿದೆ.
ಆದರೆ ಇದೀಗ ಸಮಯ ಉಳಿತಾಯ ಮಾಡಿ, ಕೇವಲ 8 ನಿಮಿಷದಲ್ಲಿ ತಲುಪಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.