ನವದೆಹಲಿ: ರಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಹಾಗೂ ನಾಲ್ಕು ಮಂದಿ ಪದಕ ವಿಜೇತರನ್ನು ಪ್ರಧಾನಿ ನರೆಂದ್ರ ಮೋದಿ ಅವರು ಗುರುವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಶ್ಲಾಘಿಸಿಸಿದರು.
ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸಿದ ಭಾರತದ 19 ಕ್ರೀಡಾಪಟುಗಳ ತಂಡ 2 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಸ್ವದೇಶಕ್ಕೆ ಮರಳಿದೆ.
ಮರಿಯಪ್ಪನ್ ತಂಗವೇಲು (ಪುರುಷರ T42 ಹೈ-ಜಂಪ್) ಹಾಗೂ ದೇವೇಂದ್ರ ಜಝಾರಿಯಾ (ಪುರುಷರ F46 ಜಾವೆಲಿನ್ ಎಸೆತ) ಚಿನ್ನದ ಪದಕ ಗೆದ್ದುಕೊಂಡರೆ ದೀಪಾ ಮಲಿಕ್ (ಮಹಿಳೆಯ F53 ಶಾಟ್ಪುಟ್) ಮತ್ತು ವರುಣ್ ಸೀಮಗ್ ಭಾಟಿ (ಪುರುಷರ T46 ಹೈ-ಜಂಪ್) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.