ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸವಿರುವ ಐತಿಹಾಸಿಕ ರೇಸ್ ಕೋರ್ಸ್ ರಸ್ತೆಯ ಹೆಸರನ್ನು ಲೋಕ ಕಲ್ಯಾಣ ಮಾರ್ಗ ಎಂದು ಮರು ನಾಮಕರಣ ಮಾಡಲಾಗಿದೆ.
ಪ್ರಧಾನಿ ನಿವಾಸವಿರುವ ರೇಸ್ ಕೋರ್ಸ್ ರಸ್ತೆಗೆ ಏಕಾತ್ಮ ಮಾರ್ಗ ಎಂದು ಪುನರ್ ನಾಮಕರಣ ಮಾಡುವ ಪ್ರಸ್ತಾವವನ್ನು ಎನ್ಡಿಎಂಸಿ ಮಂಡಳಿಯ ಸದಸ್ಯರಾಗಿರುವ ಬಿಜೆಪಿಯ ಸಂಸದೆ ಮೀನಾಕ್ಷಿ ಲೇಖೀ ಅವರು ಸಲ್ಲಿಸಿದ್ದರು. ಆದರೆ ಏಕಾತ್ಮ ಮಾರ್ಗ ಎನ್ನುವ ಹೆಸರನ್ನು ತಿರಸ್ಕರಿಸಲಾಗಿದೆ.
ನವದೆಹಲಿ ಮಹಾನಗರ ಪಾಲಿಕೆ(ಎನ್ ಡಿಎಂಸಿ)ಯ ಉನ್ನತ ಮಟ್ಟದ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ರೇಸ್ ಕೋರ್ಸ್ ರಸ್ತೆಯನ್ನು ಲೋಕಕಲ್ಯಾಣ ಮಾರ್ಗ ಎಂದು ಪುನರ್ ನಾಮಕರಣ ಮಾಡುವುದಕ್ಕೆ ಸರ್ವಾನುಮತದಿಂದ ನಿರ್ಧರಿಸಲಾಯಿತು. ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಮೀನಾಕ್ಷಿ ಲೇಖೀ ಅವರು ಪುನರ್ ನಾಮಕರಣದ ನಿರ್ಧಾರವನ್ನು ಪ್ರಕಟಿಸಿದರು.
ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದ್ದು, ನವದೆಹಲಿ ಮಹಾನಗರ ಪಾಲಿಕೆ (ಎನ್ ಡಿಎಂಸಿ) ಸಂಸತ್ ಭವನ ಸಂಕೀರ್ಣವಿರುವ ಗುರುದ್ವಾರ ರಕಬ್ ಗಂಜ್ ಹೆಸರನ್ನು ಕೂಡಾ ಬದಲಿಸಿ ಗುರು ಗೋವಿಂದ್ ಸಿಂಗ್ ಚೌರ್ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ದೆಹಲಿಯ ಪ್ರತಿಷ್ಠಿತ ಲುಟೇನ್ಸ್ನಲ್ಲಿ 12 ಎಕರೆ ಪ್ರದೇಶದಲ್ಲಿ ಐದು ಬಂಗಲೆಗಳಿರುವ ಪ್ರಧಾನಿಯವರ ಅಧಿಕೃತ ನಿವಾಸವನ್ನು 1980 ರಲ್ಲಿ ನಿರ್ಮಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.