ನವದೆಹಲಿ: ರೈಲು ನಿಲ್ದಾಣಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳ ಕಸದ ತೊಟ್ಟಿಗಳನ್ನು ಪ್ರತ್ಯೇಕಿಸಲು ತೊಟ್ಟಿಗಳಿಗೆ ಕಲರ್ ಕೋಡ್ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಎಲ್ಲ A1 ಮತ್ತು A ದರ್ಜೆಯ ರೈಲು ನಿಲ್ದಾಣಗಳಲ್ಲಿ ಜೈವಿಕ ತ್ಯಾಜ್ಯ (ಹಸಿ) ಮತ್ತು ಒಣ ತ್ಯಾಜ್ಯವನ್ನು ಎಸೆಯಲು ಪ್ರತ್ಯೇಕ ಕಸದ ತೊಟ್ಟಿಗಳನ್ನು ಇಡಲಾಗುವುದು. ಇದನ್ನು ಗುರುತಿಸಲು ಪ್ರತ್ಯೇಕ ಬಣ್ಣ ಹಚ್ಚಲಾಗುವುದು ಎಂದು ರೈಲ್ವೆ ಇಲಾಖೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಇವುಗಳಿಗೆ ಎರಡು ವಿಭಿನ್ನ ಬಣ್ಣ ಇರಲಿದ್ದು, ಒಣ ತ್ಯಾಜ್ಯಗಳ ತೊಟ್ಟಿಗಳಿಗೆ ಕಪ್ಪು ಬಣ್ಣ ಮತ್ತು ಹಸಿ ತ್ಯಾಜ್ಯಗಳ ತೊಟ್ಟಿಗಳಿಗೆ ಹಸಿರು ಬಣ್ಣ ನೀಡಲಾಗುವುದು. ರೈಲ್ವೆ ವಲಯ A1 ಮತ್ತು a ದರ್ಜೆಯ ನಿಲ್ದಾಣಗಳಿಗೆ ಪ್ರತ್ಯೇಕ ತೊಟ್ಟಿಗಳನ್ನು ಒದಗಿಸಲಿದೆ. ಡಿಸೆಂಬರ್ 31ರ ಒಳಗೆ ಈ ಸೌಲಭ್ಯ ಜಾರಿಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.