ನವದೆಹಲಿ: ಉರಿ ಮೇಲಿನ ಉಗ್ರರ ದಾಳಿಯ ವಿಚಾರವನ್ನು 71ನೇ ಸಂಯುಕ್ತ ರಾಷ್ಟ್ರ ಸಾರ್ವತ್ರಿಕ ಸಭೆಯಲ್ಲಿ ಭಾರತ ಪ್ರಸ್ತಾಪಿಸಲಿದ್ದು, ಇದರಲ್ಲಿ ಪಾಕಿಸ್ಥಾನದ ಕೈವಾಡದ ಬಗ್ಗೆ ಉಲ್ಲೇಖಿಸಲಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೆಪ್ಟೆಂಬರ್ 26ರಂದು ನಡೆಯಲಿರುವ ಸಭೆಯ ತಮ್ಮ ಭಾಷಣದಲಲಿ ಈ ವಿಚಾರವನ್ನು ಪ್ರಸ್ತಾಪಿಸಲಿದ್ದು, ಪಾಕಿಸ್ಥಾನದ ಪಾಲ್ಗೊಳ್ಳುವಿಕೆ ಬಗ್ಗೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ಥಾನವನ್ನು ‘ಉಗ್ರರ ರಾಷ್ಟ್ರ’ ಎಂದು ಗುರುತಿಸಿ ಅದನ್ನು ಪ್ರತ್ಯೇಕಿಸಬೇಕು ಎಂದು ಹೇಳಿದ ಗೃಹ ಸಚಿವ ರಾಜ್ನಾಥ್ ಸಿಂಗ್, ಉರಿ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಗೆ ತರಬೇತಿ ನೀಡಲಾಗಿದ್ದು, ಶಸ್ತ್ರಸಜ್ಜಿತವಾಗಿ ಆಗಮಿಸಿದ್ದರು ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ, ಈ ರೀತಿ ತುಚ್ಛವಾಗಿ ದಾಳಿ ನಡೆಸಿದವರನ್ನು ಶಿಕ್ಷಿಸಲಾಗುವುದು.
ಉರಿ ದಾಳಿಯಲ್ಲಿ ಹುತಾತ್ಮರಾದವರಿಗೆ ನಮನ ಸಲ್ಲಿಸುತ್ತೇನೆ. ರಾಷ್ಟ್ರಕ್ಕೆ ಅವರ ಸೇವೆಯನ್ನು ಸದಾ ನೆನಪಿಸಲಾಗುವುದು. ಹುತಾತ್ಮರಾದ ಸೈನಿಕರ ಕುಟುಂಬಳ ಜೊತೆ ನಾವಿದ್ದೇವೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.