ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 66ನೇ ಜನ್ಮದಿನವಾದ ಶನಿವಾರ ಆಯೋಜಕರು 4 ಗಿನ್ನೆಸ್ ದಾಖಲೆ ಮತ್ತು 1 ರಾಷ್ಟ್ರೀಯ ದಾಖಲೆ ನಿರ್ಮಿಸುವ ಯೋಜನೆ ಹೊಂದಿದ್ದಾರೆ.
ಮೋದಿ ಅವರ ಜನ್ಮದಿನದ ಅಂಗವಾಗಿ ಗುಜರಾತ್ ಸರ್ಕಾರ ವಿಶೇಷ ಕಾರ್ಯಕ್ರಮ ಆಯೋಜಿಸಲಿದ್ದು, ಈ ಸಂದರ್ಭದಲ್ಲಿ ದಿವ್ಯಾಂಗ ಜನರಿಗೆ 11,223 ಕಿಟ್ಗಳು ಸೇರಿದಂತೆ 17,000 ಕಿಟ್ಗಳನ್ನು ವಿತರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಆಯೋಜಕರು ಗಾಲಿಕುರ್ಚಿಗಳಲ್ಲಿ ಗರಿಷ್ಟ ಮಟ್ಟದ ಜನರೊಂದಿಗೆ ಇರುವ ಚಿತ್ರ ಅಥವಾ ಲೋಗೊ ನಿರ್ಮಿಸಿ ಈ ಹಿಂದಿನ ದಾಖಲೆ ಮುರಿಯುವ ಗುರಿ ಹೊಂದಿದೆ. ವರದಿಗಳ ಪ್ರಕಾರ 2010ರಲ್ಲಿ ಅಮೇರಿಕಾ ಗಾಲಿಕುರ್ಚಿ ಆಧಾರಿತ 346 ದಿವ್ಯಾಂಗರ ಚಿತ್ರದೊಂದಿಗೆ ದಾಖಲೆ ನಿರ್ಮಿಸಿತ್ತು.
ಇದೀಗ ಗಾಲಿಕುರ್ಚಿ ಆಧಾರಿತ 1000 ಜನರನ್ನು ಒಳಗೊಂಡ ದಾಖಲೆಯನ್ನು ಮಾಡಲಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ.
ಶ್ರವಣ ದೋಷ ಇರುವ 1000 ಜನರಿಗೆ ಶ್ರವಣ ಯಂತ್ರಗಳನ್ನು ನೀಡುವ ಮೂಲಕ ಮತ್ತೊಂದು ದಾಖಲೆ ಮಾಡಲು ಚಿಂತನೆ ನಡೆದಿದೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಈ ರೀತಿ ದಾಖಲೆ ಮಾಡಲಾಗಿತ್ತು.
1500 ತೈಲ ದೀಪಗಳನ್ನು ಒಂದೇ ಸ್ಥಳದಲ್ಲಿ ಒಂದೇ ಸಲಕ್ಕೆ ಉರಿಸಿ ದಾಖಲೆ ನಿರ್ಮಿಸಲಿದೆ.
ಇವೆಲ್ಲವನ್ನು ಗಿನ್ನೆಸ್ ದಾಖಲೆ ಅಧಿಕಾರಿಗಳು ವೀಕ್ಷಿಸಿ ಪರಿಗಣನೆಗೆ ತೆಗೆದುಕೊಳ್ಳಲಿದ್ದಾರೆ.
ಕೇಂದ್ರ ಸರ್ಕಾರದ ‘ಆಕ್ಸೆಸ್ಸಿಬಲ್ ಇಂಡಿಯಾ’ ಯೋಜನೆ ಈ ಯೋಜನೆಯಿಂದ ಪ್ರೇರಿತಗೊಂಡಿದ್ದು, ದಿವ್ಯಾಂಗರಿಗೆ ಶ್ರವಣ ಯಂತ್ರ, ಗಾಲಿಕುರ್ಚಿ, ತ್ರಿಚಕ್ರ ಗಾಲಿಕುರ್ಚಿ, ಕ್ಯಾಲಿಫರ್ ಮತ್ತು ಪ್ರಾಸ್ತೆಟಿಕ್ಸ್, ಶಿಕ್ಷಣ ಅಭಿವೃದ್ಧಿ ಕಿಟ್, ಬಹು ಇಂದ್ರಿಯ ರೋಗಿಗಳಿಗೆ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ವಿವಿಧ ಫಲಾನುಭವಿಗಳು ರಾಷ್ಟ್ರೀಯ ಪ್ರಶಸ್ತಿ ಅಡಿಯಲ್ಲಿ ದಿವ್ಯಾಂಗ ಜನರ ಸಬಲೀಕರಣಕ್ಕಾಗಿ ಚೆಕ್ಗಳನ್ನು ಪಡೆಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.