ನ್ಯೂಯಾರ್ಕ್: ಫೇಸ್ಬುಕ್, ಟ್ವಿಟರ್ ಹಾಗೂ ಏಜೆನ್ಸಿ ಫ್ರಾನ್ಸ್-ಪ್ರೆಸ್ ಸೇರಿದಂತೆ ಇತರ ಕೆಲವು ಸುದ್ದಿ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳ ಶೋಧ ನಡೆಸಿ ಸುದ್ದಿಗಳ ಗುಣಮಟ್ಟವನ್ನು ಸುಧಾರಿಸಲು ಮಾಧ್ಯಮ ಮತ್ತು ತಂತ್ರಜ್ಞಾನ ಒಕ್ಕೂಟವನ್ನು ಸೇರಿಕೊಂಡಿವೆ.
ಸುಮಾರು 20 ಸುದ್ದಿ ಸಂಸ್ಥೆಗಳು ಒಕ್ಕೂಟದ ಭಾಗೀದಾರರಾಗಿರಲಿದ್ದು, ಪತ್ರಿಕೋದ್ಯಮದ ಉತ್ತಮ ಆಚರಣೆಗಳ ಮೂಲಕ ಮಾಹಿತಿಗಳನ್ನು ಹಂಚಿಕೊಳ್ಳಲಿವೆ ಎಂದು ಗೂಗಲ್ನ ಫಸ್ಟ್ ಡ್ರಾಫ್ಟ್ ನ್ಯೂಸ್ ಘೋಷಿಸಿದೆ.
ನೆಟ್ವರ್ಕ್ ಭಾಗೀದಾರರು ಆನ್ಲೈನ್ ಸುದ್ದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಧಾರಣೆ ತರುವಲ್ಲಿ ಸುದ್ದಿ ಸಂಸ್ಥೆಗಳ ಗುರಿಯನ್ನು ಮುನ್ನಡೆಸಲಿವೆ ಎಂದು ಫಸ್ಟ್ ಡ್ರಾಫ್ಟ್ನ ವ್ಯವಸ್ಥಾಪಕ ನಿರ್ದೇಶಕಿ ಜೆನ್ನಿ ಸಾಂರ್ಜೆಂಟ್ ಹೇಳಿದ್ದಾರೆ.
ತಪ್ಪು ಮಾಹಿತಿಗಳ ಶೋಧನೆ ಕಷ್ಟದ ಕೆಲಸ. ಆದರೆ ಸುದ್ದಿ ಸಂಸ್ಥೆಗಳು ವಾಸ್ತವಾಂಶ ಮತ್ತು ಪರಿಶೀಲಿಸಿದ ಸುದ್ದಿಗಳನ್ನು ಪ್ರಕಟಿಸಿದಲ್ಲಿ ಪ್ರತಿಯೊಬ್ಬರೂ ಪ್ರಕಾಶಕ ಮತ್ತು ಸುದ್ದಿ ಮೂಲ ಆಗಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.