ಮುಂಬಯಿ: ಬಳಕೆದಾರರಿಗೆ ಬಂಪರ್ ಕೊಡುಗೆ ನೀಡುವುದರೊಂದಿಗೆ ಗುರುವಾರ ರಿಲಯನ್ಸ್ ಜಿಯೋ ಬಿಡುಗಡೆಗೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ 4G ಸೇವೆ ಅನಾವರಣ ಮಾಡುವ ಯೋಜನೆಯೊಂದಿಗೆ ಎಲ್ಲ ದೇಶೀಯ ವಾಯ್ಸ್ ಕರೆಗಳು ಮತ್ತು ರೋಮಿಂಗ್ ಉಚಿತವಾಗಿರಲಿದ್ದು, ಅಗ್ಗದ ಡಾಟಾ ಪ್ಲಾನ್ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.
ಮುಂಬಯಿಯಲ್ಲಿ ನಡೆದ ಶೇರುದಾರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಕೇಶ್ ಅಂಬಾನಿ, ಜಿಯೋ ವಿಶೇಷ ಟ್ಯಾರಿಫ್ ಪ್ಲಾನ್ ನೀಡಲಿದ್ದು ಸೆಪ್ಟೆಂಬರ್ 5ರಿಂದ ಡಿಸೆಂಬರ್ 31ರ ವರೆಗೆ ಉಚಿತ ವೆಲ್ಕಮ್ ಆಫರ್ ನೀಡಲಿದೆ. ಸಾಂದರ್ಭಿಕ ಬಳಕೆದಾರರಿಗೆ ದಿನವೊಂದಕ್ಕೆ ರೂ.19ರ ಪ್ಲಾನ್, ಕಡಿಮೆ ಡಾಟಾ ಬಳಕೆದಾರರಿಗೆ ರೂ.149 ಮತ್ತು ಅತೀ ಹೆಚ್ಚು ಡಾಟಾ ಬಳಕೆದಾರರಿಗೆ ರೂ. 4,999 ಆಫರ್ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಜಿಯೋ ನೆಟ್ವರ್ಕ್ನಿಂದ ಇತರ ಯಾವುದೇ ನೆಟ್ವರ್ಕ್ಗೆ ಮಾಡುವ ಕರೆಗಳು ಸಂಪೂರ್ಣ ಉಚಿತವಾಗಿರಲಿದ್ದು, ರೋಮಿಂಗ್ ದರ ಇರುವುದಿಲ್ಲ. ವಿದ್ಯಾರ್ಥಿಗಳು ಶೇ. 25ರಷ್ಟು ಅಧಿಕ ಡಾಟಾ ಪಡೆಯಲಿದ್ದಾರೆ. ದೀಪಾವಳಿ, ಹೊಸ ವರ್ಷಗಳಂತಹ ವಿಶೇಷ ದಿನಗಳಂದು ಮೆಸೇಜ್ಗಳಿಗೆ ಶುಲ್ಕವಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಲೈಫ್ ಬ್ರ್ಯಾಂಡ್ನ ಅಡಿಯಲ್ಲಿ ರೂ.2,999 ದರದಲ್ಲಿ ಹ್ಯಾಂಡ್ಸೆಟ್ಗಳು ದೊರೆಯಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾಗೆ ರಿಲಯನ್ಸ್ ಜಿಯೋವನ್ನು ಅರ್ಪಿಸುತ್ತಿದ್ದು, ಜಿಯೋ ಸೇವೆ ರಿಲಯನ್ಸ್ನ ಅತೀ ದೊಡ್ಡ ಬಂಡವಾಳ ಹೂಡಿಕೆಯಾಗಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.