ಜೈಪುರ್: ರಾಜಸ್ಥಾನದ ರೈಲು ನಿಲ್ದಾಣಗಳು ಆರ್ಟ್ ಗ್ಯಾಲರಿಗಳಾಗಿ ಪರಿವರ್ತನೆಗೊಂಡಿವೆ. ಇಲ್ಲಿಯ ಸವಾಯ್ ಮಾಧೋಪುರ್ ರೈಲ್ವೆ ನಿಲ್ದಾಣದ 5000 ಅಡಿ ಉದ್ದದ ಗೋಡೆ ರಣಥಾಂಬೋರ್ನ ಎಲ್ಲ ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡಿದೆ.
ಇಲ್ಲಿಯ ರೈಲು ನಿಲ್ದಾಣಗಳ ಗೋಡೆಗಳ ಮೇಲೆ ಚಿತ್ರಿಸಲ್ಪಟ್ಟಿರುವ ಕೆಲವು ಕಲಾಕೃತಿಗಳು ರಾಜ್ಯದ ಸಾಂಸ್ಕೃತಿಕ ಇತಿಹಾಸವನ್ನು ಪ್ರದರ್ಶಿಸುವ ರಾಜಸ್ಥಾನ ಸರ್ಕಾರದ ಯೋಜನೆಯಾಗಿದೆ. ನಿಲ್ದಾಣದ ಗೋಡೆಗಳ ಮೇಲೆ ಸಸ್ಯಗಳು ಮತ್ತು ಪ್ರಾಣಿಗಳು, ಹುಲಿ, ಚಿರತೆಗಳ ಚಿತ್ರಗಳನ್ನು ಚಿತ್ರಿಸಲಾಗಿದೆ. ಸವಾಯ್ ಮಾಧೋಪುರ್ ಯೋಜನೆ ಇತ್ತೀಚೆಗೆ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದೆ.
ಸವಾಯ್ ಮಾಧೋಪುರ್ ಅಲ್ಲದೇ ಜೈಪುರ್, ಉದಯಪುರ್, ಅಜ್ಮೇರ್ ಸೇರಿದಂತೆ 7 ನಿಲ್ದಾಣಗಳನ್ನು ಕಳೆದ ಒಂದು ವರ್ಷದಲ್ಲಿ ಸ್ಥಳೀಯ ಕಲಾಕೃತಿಗಳಿಂದ ಅಲಂಕೃತಗೊಳಿಸಲಾಗಿದೆ.
ರಾಜಸ್ಥಾನ ಸರ್ಕಾರ ಉದಯ್ಪುರ್ನಲ್ಲಿ ಬನ್ನಿ- ಥನ್ನಿ ಡೈ ಆರ್ಟ್, ಪಿಚ್ವಾಯ್ ವರ್ಣಚಿತ್ರಚಿತ್ರಗಳ ಕಲಾಪ್ರಕಾರಗಳನ್ನು ಬಳಸಿದೆ.
ಇದು ಸ್ವಚ್ಛ ಭಾರತ ಅಭಿಯಾನದ ಒಂದು ಭಾಗವಾಗಿದ್ದು, ಸ್ಥಳೀಯ ಕಲಾ ಸಂಸ್ಕೃತಿಯ ಪ್ರಚಾರದ ಜೊತೆಗೆ ಸ್ವಚ್ಛತೆಯ ಸಂದೇಶ ನೀಡುವುದು ಈ ಯೋಜನೆಯ ಆದ್ಯತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.