ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದಾಗಿ ಮೌಂಟ್ ಎವರೆಸ್ಟ್ ಪರ್ವತಾರೋಹಣದಲ್ಲಿದ್ದ 20ಕ್ಕೂ ಅಧಿಕ ಪರ್ವತಾರೋಹಿಗಳು ಮೃತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿದೇಶಿಗರು ಸೇರಿದಂತೆ ಹಲವಾರು ಮಂದಿ ಹಿಮಕುಸಿತಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ. ಹಲವಾರು ಮಂದಿ ಕಣ್ಮರೆಯಾಗಿದ್ದಾರೆ. ಮೂಲ ಶಿಬಿರದಲ್ಲಿದ್ದ 17 ಮಂದಿ ಮತ್ತು ಮೂಲ ಶಿಬಿರಕ್ಕಿಂತ ಕೆಳಗಿನ ಪ್ರದೇಶದಲ್ಲಿದ್ದ ಐದು ಮಂದಿ ಮೃತಪಟ್ಟಿದ್ದಾರೆ ಎಂದು ಗೃಹಸಚಿವಾಲಯ ಹೇಳಿದೆ.
ಪರ್ವತಾರೋಹಿಗಳಿಗಾಗಿ ಹಾಕಲಾಗಿದ್ದ ಟೆಂಟ್ಗಳು ಗಾಳಿಗೆ ಹಾರಿಹೋಗಿವೆ, ಹಿಮ ಕುಸಿತಕ್ಕೆ ಜಖಂ ಆಗಿವೆ. ಇಡೀ ಪರ್ವತವೇ ಅಸ್ತವ್ಯಸ್ತಗೊಂಡಿದ್ದು, ಸಾವಿನ ಸಂಖ್ಯೆ ಏರಲಿದೆ ಎಂದು ತಜ್ಞರು ಹೇಳಿದ್ದಾರೆ.
ಜಗತ್ತಿನ ಅತ್ಯಂತ ಎತ್ತರದ ಪರ್ವತಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ದುಡಿಯುತ್ತಿದ್ದ ಗೂಗಲ್ ಎಂಜಿನಿಯರ್ ಡ್ಯಾನ್ ಫ್ರೆಡಿನ್ಬರ್ಗ್ ಎವರೆಸ್ಟ್ನ ಬೇಸ್ ಕ್ಯಾಂಪ್ನಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.
ಪ್ರತಿಕೂಲ ಹವಾಮಾನ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡುತ್ತಿದೆ. ಅದರ ನಡುವೆಯೂ ತೀವ್ರವಾಗಿ ಗಾಯಗೊಂಡಿರುವ ಪರ್ವತಾರೋಹಿಗಳನ್ನು ಭಾರತೀಯ ವಾಯುಪಡೆ ಸೇರಿದಂತೆ ವಿವಿಧ ಹೆಲಿಕಾಫ್ಟರ್ಗಳ ಮೂಲಕ ಸಮೀಪದ ಫೆರಿಚೆ ಗ್ರಾಮಕ್ಕೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವು ಗಾಯಾಳುಗಳನ್ನು ಹೆಲಿಕಾಫ್ಟರ್ನಲ್ಲಿ ದೆಹಲಿಗೆ ಕರೆತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.