ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಅಮೇರಿಕಾ ರಾಯಭಾರಿ ಹುಸೇನ್ ಹಕ್ಕಾನಿಯವರು ಭಾರತ-ಪಾಕಿಸ್ಥಾನದ ನಡುವೆ ಶಾಂತಿ ಕಾಪಾಡಲು ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.
ಪಾಕಿಸ್ಥಾನದ ವಶದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು, ಭಾರತದ ಬಳಿ ಇರುವ ಜಮ್ಮು ಕಾಶ್ಮೀರವನ್ನು ಆಯಾ ಆಯಾ ದೇಶಗಳಿಗೆ ಬಿಟ್ಟು ಬಿಡಿ. ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಇನ್ನೊಂದು ದೇಶ ಮೂಗು ತೂರಿಸಬಾರದು. ಇದರಿಂದ ಉಭಯ ದೇಶಗಳಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಪಾಕಿಸ್ಥಾನದ ನವಾಜ್ ಶರೀಫ್ರ ಪರವಾಗಿ ಪಿಒಕೆನಲ್ಲಿ ಎಲೆಕ್ಷನ್ ರಿಗ್ಗಿಂಗ್ ನಡೆಯುತ್ತಿದೆ ಎಂದು ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಗಿಲ್ಗಿಸ್ಥಾನ್ ಮತ್ತು ಪಿಒಕೆಯಲ್ಲಿನ ಸಮಸ್ಯೆಯನ್ನು ಪಾಕಿಸ್ಥಾನಕ್ಕೆ ಬಿಟ್ಟುಬಿಡಿ. ಕಾಶ್ಮೀರದಲ್ಲಿನ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಭಾರತಕ್ಕೆ ಬಿಟ್ಟು ಬಿಡಿ. ಆಗ ಮಾತ್ರ ಗಡಿ ಭಾಗದಲ್ಲಿ ಶಾಂತಿ ಸ್ಥಾಪನೆ ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.