ಕೊಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯಕ್ಕೆ ಬಾಂಗ್ಲಾ ಅಥವಾ ಬಂಗಾಳ ಎಂದು ಮರು ನಾಮಕರಣ ಮಾಡುವ ಇಂಗಿತವನ್ನು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದಾರೆ.
ಆಲ್ಫಾಬೆಟ್ಗೆ ಅನುಗುಣವಾಗಿ ರಾಜ್ಯಗಳನ್ನು ಪಟ್ಟಿ ಮಾಡಿದಾಗ ಪಶ್ಚಿಮ ಬಂಗಾಳದ ಹೆಸರು ಕೆಳಗೆ ಬರುತ್ತದೆ. ಇದು ಮಮತಾ ಅವರಿಗೆ ಇಷ್ಟವಿಲ್ಲ ಎನ್ನಲಾಗಿದೆ. ಇತ್ತೀಚೆಗೆ ನಡೆದ ಇಂಟರ್ಸ್ಟೇಟ್ ಸಭೆಯಲ್ಲಿ ತನ್ನ ಅವಧಿ ಬರಲು ಮಮತಾ ಬ್ಯಾನರ್ಜಿ ಸಾಕಷ್ಟು ಹೊತ್ತು ಕಾಯಬೇಕಾಯಿತು. ಆಲ್ಫಬೆಟಿಕೆ ಆರ್ಡರ್ನಲ್ಲಿ ಅವರ ರಾಜ್ಯದ ಹೆಸರು ಕೆಳಗೆ ಇದ್ದಿದ್ದೇ ಇದಕ್ಕೆ ಕಾರಣ.
‘ಪಶ್ಚಿಮ ಬಂಗಾಳದ ಟರ್ಮ್ ಬಂದಾಗ ಎಲ್ಲಾ ಭಾಷಣಕಾರರು, ಕೇಳುಗರು ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಎಲ್ಲಾ ಪ್ರಮುಖ ಸಭೆಗಳಲ್ಲೂ ಇದು ಸಾಮಾನ್ಯವಾಗಿದೆ. ನಮ್ಮ ಸಿಎಂ ತನ್ನ ರಾಜ್ಯದ ಅಭಿಪ್ರಾಯ ಮಂಡನೆಗೆ ಸಾಕಷ್ಟು ಹೋಂವರ್ಕ್ ಮಾಡಿಕೊಂಡು ಬರುತ್ತಾರೆ. ಆದರೆ ಅವರನ್ನು ಕೇಳುವವರು ಯಾರೂ ಇರುವುದಿಲ್ಲ ಎಂದು ಅಲ್ಲಿನ ಅಧಿಕಾರಿಯೊಬ್ಬರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಅಲ್ಲದೆ ನಾವು ಸಾಕಷ್ಟು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದಿರುವ ಮಮತಾ ಬ್ಯಾನರ್ಜಿ ತನ್ನ ಅಧಿಕಾರಿಗಳಿಗೆ ಹೆಸರು ಬದಲಾವಣೆಯ ಪ್ರಕ್ರಿಯೆ ಆರಂಭಿಸುವಂತೆ ಕರೆ ನೀಡಿದ್ದಾರೆ.
ಬಾಂಗ್ಲಾ ಎಂಬ ಹೆಸರನ್ನು ಅವರು ಅಧಿಕೃತಗೊಳಿಸುವ ಸಾಧ್ಯತೆ ಇದೆ. ಈಗಾಗಲೇ ಪೂರ್ವ ಬಂಗಾಳ ಭಾರತದ ಹೊರ ಹೋಗಿರುವ ಕಾರಣ ಪಶ್ಚಿಮ ಬಂಗಾಳ ಎಂದು ಸಂಬೋಧನೆ ಮಾಡುವ ಅಗತ್ಯವಿಲ್ಲ ಎಂಬುದು ಅವರ ವಾದವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.