ನವದೆಹಲಿ : ಬಿಜೆಪಿ ಎಂಪಿ ಹಾಗೂ ಬಿಸಿಸಿಐ ಅಧ್ಯಕ್ಷರಾಗಿರುವ ಅನುರಾಗ್ ಠಾಕೂರ್ ಅವರು ಮಹತ್ವದ ಸಾಧನೆಯೊಂದನ್ನು ಮಾಡಲು ಹೊರಟಿದ್ದಾರೆ.
41 ವರ್ಷದ ಠಾಕೂರ್ ಟೆರಿಟೋರಿಯಲ್ ಆರ್ಮಿಗೆ ಶುಕ್ರವಾರ ನಿಯೋಜನೆಗೊಳ್ಳಲಿದ್ದು, ಅಲ್ಲಿ ರೆಗ್ಯುಲರ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಚಂಡೀಗಢದಲ್ಲಿ ನಡೆದ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದಲ್ಲಿ ಇವರು ತೇರ್ಗಡೆಗೊಂಡಿದ್ದು, ಭೋಪಾಲ್ನಲ್ಲಿ ನಡೆದ ತರಬೇತಿಯಲ್ಲೂ ಭಾಗವಹಿಸಿ ಇದೀಗ ಟೆರಿಟೋರಿಯಲ್ ಆರ್ಮಿಯನ್ನು ಸೇರುತ್ತಿದ್ದಾರೆ.
ಈ ಮೂಲಕ ಸೇನಾಪಡೆಯನ್ನು ಸೇರುತ್ತಿರುವ ಬಿಜೆಪಿ ಮೊಟ್ಟ ಮೊದಲ ಹಾಲಿ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಹಿಮಾಚಲ್ ಪ್ರದೇಶದ ಹಮೀರ್ಪುರ್ ಸಂಸದರಾಗಿರುವ ಇವರು ಟೆರಿಟೋರಿಯಲ್ ಆರ್ಮಿಯಲ್ಲಿ ರೆಗ್ಯುಲರ್ ಆಫೀಸರ್ ಆಗಿ ಕೆಲವೊಂದು ಕಡ್ಡಾಯ ತರಬೇತಿಗಳನ್ನು ಪೂರೈಸಬೇಕಾಗಿದೆ.
ಟೆರಿಟೋರಿಯಲ್ ಆರ್ಮಿಯು ರೆಗ್ಯುಲರ್ ಆರ್ಮಿಯ ಬಳಿಕ ಇರುವ ಎರಡನೇ ಹಂತದ ರಕ್ಷಣಾ ಕ್ರಮವಾಗಿದೆ. ಸ್ವಯಂ ಆಸಕ್ತರು ತಿಂಗಳಿನಿಂದ ವರ್ಷದವರೆಗೆ ತರಬೇತಿ ಪಡೆದು ಇದಕ್ಕೆ ಸೇರಬಹುದಾಗಿದೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಇವರನ್ನು ಬಳಸಿಕೊಳ್ಳಲಾಗುತ್ತದೆ. ಟೆರಿಟೋರಿಯಲ್ ಆರ್ಮಿ ಎಂಬುದು ವೃತ್ತಿ ಅಥವಾ ಉದ್ಯೋಗದ ಮೂಲವಲ್ಲ. ಇದು ಸಿವಿಲ್ ಪ್ರೊಪೆಷನ್ನಲ್ಲಿ ಇರುವವರಿಗಾಗಿಯೇ ಇರುವ ಒಂದು ಸೇನಾ ಅಂಗ.
ಸ್ವ ಉದ್ಯೋಗ ಅಥವಾ ಸಿವಿಲ್ ಪ್ರೊಪೆಷನ್ನಲ್ಲಿ ಇರುವುದು ಟೆರಿಟೋರಿಯಲ್ ಆರ್ಮಿ ಸೇರಲು ಬೇಕಾಗಿರುವ ಆರ್ಹತೆಗಳಲ್ಲಿ ಒಂದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.