ಮುಂಬೈ : ರಿಲಾಯನ್ಸ್ ಮುಖಂಡ ಮುಖೇಶ್ ಅಂಬಾನಿ ಅವರಿಗೆ ‘ಝೆಡ್’ ಕೆಟಗರಿ ಭದ್ರತೆ ನೀಡಿದ ಬಳಿಕ ಇದೀಗ ಅವರ ಪತ್ನಿ ನೀತಾ ಅಂಬಾನಿಗೂ ಕೇಂದ್ರ ಸರ್ಕಾರ ಸಿಆರ್ಪಿಎಫ್ ಕಮಾಂಡೋಗಳನ್ನೊಳಗೊಂಡ ‘ವೈ’ ಕೆಟಗರಿ ಭದ್ರತೆಯನ್ನು ನೀಡಿದೆ.
ನೀತಾ ಅವರು ಪ್ರಯಾಣಿಸುವ ಪ್ರತಿ ಕ್ಷಣವೂ 10 ಶಸ್ತ್ರಸಜ್ಜಿತ ಸಿಆರ್ಪಿಎಫ್ ಯೋಧರು ಅವರನ್ನು ಗಾರ್ಡ್ ಮಾಡಲಿದ್ದಾರೆ. ಕೇಂದ್ರದ ಭದ್ರತಾ ಏಜೆನ್ಸಿಗಳು ನೀತಾ ಅವರಿಗೆ ಬೆದರಿಕೆ ಇರುವ ಬಗ್ಗೆ ಮತ್ತು ಅವರಿಗೆ ವಿಶೇಷ ಭದ್ರತೆ ಅಗತ್ಯ ಇರುವ ಬಗ್ಗೆ ವರದಿಯನ್ನು ನೀಡಿದ ಹಿನ್ನಲೆಯಲ್ಲಿ ಕೇಂದ್ರ ಗೃಹಸಚಿವಾಲಯ ಆವರಿಗೆ ‘ವೈ’ ಕೆಟಗರಿ ಭದ್ರತೆಯನ್ನು ನೀಡಿದೆ.
ಈ ಮೂಲಕ ಸರ್ಕಾರದ ವಿವಿಐಪಿ ಭದ್ರತೆಯನ್ನು ಪಡೆದ ದೇಶದ ಮೊದಲ ಖಾಸಗಿ ದಂಪತಿಗಳಾಗಿ ಅಂಬಾನಿಗಳು ಹೊರಹೊಮ್ಮಿದ್ದಾರೆ.
2013 ರಲ್ಲಿ ಕೇಂದ್ರ ಮೊದಲ ಬಾರಿಗೆ ಖಾಸಗಿ ವ್ಯಕ್ತಿಗಳಿಗೆ, ಅದರಲ್ಲೂ ದೇಶದ ಅತಿ ಶ್ರೀಮಂತ ಮುಖೇಶ್ ಅಂಬಾನಿಗೆ ಭದ್ರತೆಯನ್ನು ನೀಡುವ ಸೌಲಭ್ಯಕ್ಕೆ ಸಮ್ಮತಿ ನೀಡಿತ್ತು. ಅವರಿಗೆ ಹೆಚ್ಚಿನ ಬೆದರಿಕೆ ಇರುವ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ‘ಝೆಡ್+’ ಬಳಿಕ ‘ಝೆಡ್’ ಕೆಟಗರಿ ದೇಶದ ಎರಡನೇ ಅತಿ ದೊಡ್ಡ ಭದ್ರತಾ ಕ್ರಮವಾಗಿದೆ. ‘ವೈ’ ಕೆಟಗರಿ ಅದಕ್ಕಿಂತ ಕೆಳಗಿನ ಭದ್ರತೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.