ನವದೆಹಲಿ : ಭಾರತೀಯ ಗುಪ್ತಚರ ಇಲಾಖೆಯು ಸೆಕ್ಯುರಿಟಿ ಅಸಿಸ್ಟೆಂಟ್ ಪೋಸ್ಟ್ಗೆ ನೇಮಕಾತಿ ಮಾಡಲು ಮುಂದಾಗಿದ್ದು, ಒಟ್ಟು 209 ಹುದ್ದೆಗಳು ಬಾಕಿ ಇವೆ.
ಈಗಾಗಲೇ ಆಸಕ್ತರು ಅರ್ಜಿ ಸಲ್ಲಿಸುವಂತೆ ಗುಪ್ತಚರ ಇಲಾಖೆ ಅಧಿಕೃತ ನೋಟಿಫಿಕೇಶನ್ ನೀಡಿದೆ.
ಆಗಸ್ಟ್ 6 ರೊಳಗೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿದಾರರಿಗೆ ಇರಬೇಕಾದ ಪ್ರಮುಖ ಅರ್ಹತೆಗಳೆಂದರೆ, 10ನೇ ತರಗತಿಯನ್ನು ತೇರ್ಗಡೆ ಮಾಡಿರಬೇಕು, 1 ವರ್ಷದ ಡ್ರೈವಿಂಗ್ ಅನುಭವವಿರುವುದು, ಅಲ್ಲದೆ ಅರ್ಜಿದಾರರು 30 ವರ್ಷ ಮೇಲ್ಪಟ್ಟವರಾಗಿರಬೇಕು.
ಎಸ್ಸಿ, ಎಸ್ಟಿ ಅಥವಾ ಮೀಸಲಾತಿ ಕೆಟಗರಿಯವರಿಗೆ ಸರಕಾರಿ ನಿಯಮದಂತೆ ವಯಸ್ಸಿನ ವಿನಾಯಿತಿ ಇದೆ. ಡ್ರೈವಿಂಗ್ ಟೆಸ್ಟ್ನ ಆಧಾರದಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಲಾಗುತ್ತದೆ.
ಆಯ್ಕೆಯನ್ನು ಗೃಹಸಚಿವಾಲಯದ ನೇಮಕಾತಿ ಮಂಡಳಿ ಗುಪ್ತಚರ ಇಲಾಖೆ ನಡೆಸಲಿದೆ.
ಅರ್ಜಿಯ ದರ 50 ರೂಪಾಯಿ ಆಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ mha.nic.in ಗೆ ಲಾಗ್ ಆನ್ ಆಗಿ ಲಿಂಕ್ನ್ನು ಕ್ಲಿಕ್ ಮಾಡಿ ಎಲ್ಲಾ ದಾಖಲೆಗಳನ್ನು ಅಲ್ಲಿಗೆ ಅಪ್ಲೋಡ್ ಮಾಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.