ನವದೆಹಲಿ : ಲೆಜೆಂಡರಿ ಸಿಂಗರ್ ಮುಖೇಶ್ ಅವರ 93 ನೇ ಜನ್ಮದಿನದ ಪ್ರಯುಕ್ತ ಶುಕ್ರವಾರ ಇಂಟರ್ನೆಟ್ ದಿಗ್ಗಜ ಗೂಗಲ್ ಅವರಿಗೆ ತನ್ನ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಮುಖೇಶ್ ಎಂದು ಖ್ಯಾತರಾಗಿರುವ ಮುಖೇಶ್ ಚಂದ್ ಮಾಥೂರ್ 1949 ರಲ್ಲಿ ಅಂದಾಜ್ ಸಿನಿಮಾಗೆ ಹಿನ್ನೆಲೆ ಗಾಯನ ನೀಡುವ ಮೂಲಕ ಪ್ರಸಿದ್ಧಿಗೆ ಬಂದವರು.
1923 ರ ಜೂನ್ 22 ರಂದು ದೆಹಲಿಯಲ್ಲಿ ಜನಿಸಿದ ಇವರ ಪ್ರತಿಭೆಯನ್ನು ಬೆಳಕಿಗೆ ತಂದವರು ಮೋತಿಲಾಲ್. ಇವರ ತಂಗಿಯ ಮದುವೆಯಲ್ಲಿ ಮುಖೇಶ್ ಹಾಡಿದ್ದರು.
ಸಂಗೀತ ಲೋಕದ ಅದ್ವಿತೀಯ ತಾರೆಯಾಗಿ ಮೆರೆದ ಮುಖೇಶ್ ಬಂಗಾರದ ಕಂಠದ ವ್ಯಕ್ತಿಯೆಂದೇ ಕರೆಯಲ್ಪಡುತ್ತಾರೆ.
ಶಾಸ್ತ್ರೀಯ ಸಂಗೀತವನ್ನು ಪಂಡಿತ್ ಜಗನ್ನಾಥ್ ಪ್ರಸಾದರಿಂದ ಕಲಿತ ಇವರಿಗೆ ನಿರ್ದೇಶಕ ನೌಶಾದ್ ಅಲಿಯವರು ಅಂದಾಜ್ ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದರು.
1974 ರಲ್ಲಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದ ಮುಖೇಶ್. 1977 ರಲ್ಲಿ ಫಿಲ್ಮ್ ಫೇರ್ ಪ್ರಶಸ್ತಿಗೆ ಭಾಜನರಾದರು. ಒಟ್ಟು 1300 ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಅಮೇರಿಕದಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದ ವೇಳೆ ಅರ್ಧದಲ್ಲಿ ಎದ್ದು ಹೋದ ಇವರು ಬಳಿಕ ಅಂದೇ ಅಸುನೀಗಿದ್ದರು. ಬಳಿಕ ಸಂಗೀತ ಕಛೇರಿಯನ್ನು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಪೂರ್ಣಗೊಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.