ಕಠ್ಮಂಡು: ಶನಿವಾರ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮಡಿದವರ ಸಂಖ್ಯೆ 3,200 ದಾಟಿದೆ, 7 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸೋಮವಾರ ಮೂಲಗಳು ತಿಳಿಸಿವೆ.
ಭೀಕರ ದುರಂತದಿಂದಾಗಿ ನೇಪಾಳ ಸ್ಮಶಾನದಂತೆ ಗೋಚರವಾಗುತ್ತಿದ್ದು, ಕಣ್ಣು ಹಾಯಿಸಿದಲೆಲ್ಲಾ ಮೃತದೇಹಗಳು, ತಮ್ಮವರನ್ನು ಕಳೆದುಕೊಂಡು ಆಕ್ರಂದಿಸುತ್ತಿರುವ ಜನರು, ಕುಸಿದು ಬಿದ್ದ ಕಟ್ಟಡಗಳ ದೃಶ್ಯಗಳು ಹೃದಯ ಕಲಕುವಂತಿದೆ.
ಪ್ರವಾಸಕ್ಕೆಂದು ಬಂದಿದ್ದ 300 ಮಂದಿ ಆಸ್ಟ್ರೇಲಿಯಾ ಪ್ರಜೆಗಳು ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮೃತರಲ್ಲಿ ಹಲವಾರು ವಿದೇಶಿ ಪ್ರಜೆಗಳೂ ಕೂಡ ಇದ್ದಾರೆ.
ದುಃಖತಪ್ತ ನೇಪಾಳಕ್ಕೆ ಭಾರತ ನೆರವಿನ ಹಸ್ತ ಚಾಚಿತ್ತು ನಮ್ಮ ಸೇನಾ ಪಡೆಗಳು ನಿರಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. 1950ಕ್ಕೂ ಅಧಿಕ ಭಾರತೀಯರನ್ನು ನೇಪಾಳದಿಂದ ರಕ್ಷಣೆ ಮಾಡಲಾಗಿದೆ. ಬಿಕೆ ಪ್ರಸಾದ್ ನೇತೃತ್ವದ ಭಾರತದ ಆಂತರಿಕ ಸಚಿವರುಗಳ ತಂಡ ಈಗಾಗಲೇ ನೇಪಾಳಕ್ಕೆ ತೆರಳಿದೆ.
ನೇಪಾಳಕ್ಕೆ ಶುದ್ಧ ಕುಡಿಯುವ ನೀರು, ಔಷಧಿ, ತುರ್ತು ವಸತಿ ಮತ್ತು ದೂರ ಸಂಪರ್ಕವನ್ನು ಒದಗಿಸುವುದಕ್ಕಾಗಿ ಯುರೋಪಿಯನ್ ಕಮಿಷನ್ 3.25 ಮಿಲಿಯನ್ ಯುಎಸ್ ಡಾಲರ್ ಅನುದಾನ ಘೋಷಿಸಿದೆ.
80 ವರ್ಷಗಳಲ್ಲೇ ಹಿಮಾಲಯ ರಾಷ್ಟ್ರ ಕಂಡು ಕೇಳರಿಯದ ಭಿಕರ ದುರಂತ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.