ನವದೆಹಲಿ : ಆಕೆ ರಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅರ್ಹತೆಯನ್ನು ಕಳೆದುಕೊಂಡಿರಬಹುದು. ಆದರೆ ಸಂಸದೆಯೂ ಆಗಿರುವ ಮೇರಿ ಕೋಮ್ ರಾಜ್ಯಸಭೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಸಂಸದೆಯಾಗುವ ಗುರಿ ಹೊಂದಿದ್ದಾರೆ.
ಮೇ ನಲ್ಲಿ ತನ್ನ ಮೊದಲ ಅಧಿವೇಶನದಲ್ಲಿ ಆಕೆ ಕಳಪೆ ಪ್ರದರ್ಶನ ನೀಡಿದ್ದು, ಶೇ. 21 ರಷ್ಟು ಹಾಜರಾತಿ ಹೊಂದಿದ್ದರು. ಆದರೆ ಜುಲೈ 18 ರಿಂದ ಆರಂಭವಾದ ಮಳೆಗಾಲದ ಅಧಿವೇಶನಕ್ಕೆ ತಪ್ಪದೆ ಹಾಜರಾಗುತ್ತಿದ್ದಾರೆ.
ಲಂಡನ್ ಒಲಿಂಪಿಕ್ಸ್ನ ಕಂಚಿನ ಪದಕ ವಿಜೇತೆಯಾಗಿರುವ ಇವರು ಹಲವಾರು ವಿಷಯಗಳ ಬಗ್ಗೆ ತಮ್ಮನ್ನು ತಾವು ಶಿಕ್ಷಿತರನ್ನಾಗಿಸುತ್ತಿದ್ದಾರೆ. ನಾನೀಗ ಕಲಿಯುತ್ತಿದ್ದು ರಾಜ್ಯಸಭೆಗೆ ತಪ್ಪದೆ ಹಾಜರಾಗುತ್ತಿದ್ದೇನೆ ಎಂದು ಸಂದರ್ಶಕರ ಬಳಿ ಹೇಳಿಕೊಂಡಿದ್ದಾರೆ.
ಏಪ್ರಿಲ್ನಲ್ಲಿ ರಾಜ್ಯಸಭೆಗೆ ಇವರ ಆಯ್ಕೆಯಾಗಿದ್ದು ಮೇಲ್ಮನೆಯಲ್ಲಿರುವ ಇತರ ಸೆಲೆಬ್ರಿಟಿಗಳಂತೆ ಆಗಲು ಬಯಸುತ್ತಿಲ್ಲ.
ಮೇರಿ ಕೋಮ್ ಅವರು ಉದಾತ್ತವಾದ ಅಶಯಗಳನ್ನಿಟ್ಟುಕೊಂಡು ರಾಜ್ಯಸಭೆಗೆ ಬಂದಿದ್ದು ತನ್ನ ತವರು ಈಶಾನ್ಯ ಭಾಗಕ್ಕೆ ಏನಾದರೂ ಮಾಡುವ ಹಂಬಲ ಅವರದ್ದು. ಅಲ್ಲದೇ ರಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಸಲುವಾಗಿ ರಾಜ್ಯಸಭಾದ ಸ್ಥಾನವನ್ನು ತಾನು ದುರ್ಬಳಕೆ ಮಾಡಿಕೊಳ್ಳಲಾರೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.