ನವದೆಹಲಿ : ಹೆಚ್ಚಿನ ಜನರನ್ನು ಅದರಲ್ಲೂ ಮುಖ್ಯವಾಗಿ ಯುವಜನತೆಯನ್ನು ಪ್ರಮುಖವಾಗಿ ತಲುಪುವ ಸಲುವಾಗಿ ಕೇಂದ್ರ ಸರ್ಕಾರ ತನ್ನ ವಿದೇಶಾಂಗ ನೀತಿ ಯೋಜನೆಗಳನ್ನು ಹೆಚ್ಚು ಪ್ರಚಾರ ಮಾಡಲು ಮುಂದಾಗಿದೆ. ಇದಕ್ಕಾಗಿ ಬ್ರಿಕ್ಸ್ ಶೃಂಗ ಸಭೆಯನ್ನು ಬಳಸಿಕೊಳ್ಳುತ್ತಿದೆ.
90 ಕ್ಕೂ ಅಧಿಕ ಸಮಾರಂಭಗಳನ್ನು ಅಲ್ಲಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ. ಇದರ ಆರಂಭ ಅಕ್ಟೋಬರ್ 15 ರಿಂದ 16 ರವರೆಗೆ ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗ ಸಭೆಯಿಂದ ಆರಂಭವಾಗಲಿದೆ.
ವಿಶ್ವದ ಜನಸಂಖ್ಯೆಯ ಶೇ. 42 ರಷ್ಟು ಮತ್ತು ಜಾಗತಿಕ ಜಿಡಿಪಿಯ ಶೇ. 22 ರಷ್ಟು ಹೊಂದಿರುವ 5 ಬ್ರಿಕ್ಸ್ ದೇಶಗಳಾದ ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಆಫ್ರಿಕಾಗಳ ನಡುವೆ ೮ನೇ ಸಭೆ ನಡೆಯಲಿದ್ದು ಈ ವೇಳೆ ಗೋವಾದ ವಿವಿಧ ನಗರಗಳಲ್ಲಿ 90ಕ್ಕೂ ಅಧಿಕ ಸಮಾರಂಭಗಳನ್ನು ಏರ್ಪಡಿಸಲು ವಿದೇಶಾಂಗ ಸಚಿವಾಲಯ ಮುಂದಾಗಿದೆ.
ಬ್ರಿಕ್ಸ್ನ್ನು ಜನಕೇಂದ್ರಿತಗೊಳಿಸಲು ಜನರಿಂದ ಜನರಿಗೆ ಸಂಪರ್ಕ ಸಾಧಿಸಲು ಅದರಲ್ಲೂ ಮುಖ್ಯವಾಗಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಸಮಾರಂಭಗಳ ಮುಖ್ಯ ಉದ್ದೇಶ ಎಂದು ಸಚಿವಾಲಯ ವಿವರಿಸಿದೆ.
ಶಿಕ್ಷಣ, ಪರಿಸರ, ನಗರಾಭಿವೃದ್ಧಿ, ಆರೋಗ್ಯ, ಕಾರ್ಮಿಕ, ಕಾನೂನು, ರೈಲ್ವೆ ಮತ್ತು ವಾಣಿಜ್ಯ ಹೀಗೆ ವಿವಿಧ ವಲಯಗಳ ಬಗ್ಗೆ ಸಭೆ ಅಥವಾ ಸಮಾರಂಭ ಏರ್ಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೃಂಗ ಸಭೆಗಳು ಯಾವತ್ತೂ ಮುಚ್ಚಿದ ಕೋಣೆಯೊಳಗೆ ನಡೆಯುತ್ತದೆ. ಆದರೆ ಈ ಬಾರಿಯ ಬ್ರಿಕ್ಸ್ ಶೃಂಗ ಸಭೆ ವಿಭಿನ್ನವಾಗಿದ್ದು ಇದೇ ಮೊದಲ ಬಾರಿಗೆ ಜನರನ್ನು ತಲುಪಲು ಸಭೆ ಸಮಾರಂಭಗಳನ್ನು ಏರ್ಪಡಿಸಲಾಗುತ್ತಿದೆ.
2012 ರ ಬಳಿಕ ಇದು ಎರಡನೇ ಬಾರಿಗೆ ಭಾರತ ಬ್ರಿಕ್ಸ್ ಶೃಂಗಸಭೆಯನ್ನು ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.