ನವದೆಹಲಿ: ಅತೀ ಅಗತ್ಯ ಸಂದರ್ಭ ಹೊರತುಪಡಿಸಿ ಇತರ ಯಾವುದೇ ಪ್ರಕ್ರಿಯೆಗಳಲ್ಲಿ 14 ವರ್ಷದೊಳಗಿನ ಮಕ್ಕಳ ಉದ್ಯೋಗ ನಿಷೇಧಕ್ಕೆ ರಾಜ್ಯ ಸಭೆಯಲ್ಲಿ ಮಸೂದೆ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘನೆಗೆ 2 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಿದೆ.
ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕವು 14 ವರ್ಷದೊಳಗಿನ ಮಕ್ಕಳ ಉದ್ಯೋಗದಾತರನ್ನು ವೇದ್ಯ ಅಪರಾಧ ಎಂದು ಪರಿಗಣಿಸಲಿದೆ ಹಾಗೂ ಪೋಷಕರಿಗೆ ದಂಡ ವಿಧಿಸಲಾಗುವುದು.
ಈ ಮಸೂದೆಯನ್ನು ವಾಯ್ಸ್ ವೋಟ್ ಮೂಲಕ ಅನುಮೋದನೆ ನೀಡಲಾಗಿದ್ದು, 14-18 ವರ್ಷದೊಳಗಿನ ಮಕ್ಕಳನ್ನು ಹದಿಹರೆಯದ ಮಕ್ಕಳು ಎಂದು ಪರಿಗಣಿಸಲಾಗಿದ್ದು, ಈ ಮಕ್ಕಳನ್ನು ಯಾವುದೇ ಅಪಾಯಕಾರಿ ವೃತ್ತಿಗೆ ಸೇರಿಸಬಾರದು ಎಂದು ಸೂಚಿಸಲಾಗಿದೆ.
ಬಾಲ ಕಾರ್ಮಿಕ ಕಾಯಿದೆ ಉಲ್ಲಂಘನೆ ಅಪರಾಧಕ್ಕೆ ಈ ಹಿಂದಿನ 3 ತಿಂಗಳಿನಿಂದ 1 ವರ್ಷ ಜೈಲು ಶಿಕ್ಷೆ ಹಾಗೂ 10,000 ರಿಂದ 20,000 ದಂಡವನ್ನು ಹೆಚ್ಚಿಸಲಾಗಿದೆ. ತಿದ್ದುಪಡಿ ಮಸೂದೆಯಡಿ 6 ತಿಂಗಳಿನಿಂದ 2 ವರ್ಷ ಜೈಲು ಶಿಕ್ಷೆ ಹಾಗೂ 20,000 ದಿಂದ 50,000 ದಂಡ ವಿಧಿಸಲಾಗುವುದು. ಎರಡನೇ ಬಾರಿ ನಿಯಮ ಉಲ್ಲಂಘಿಸಿದಲ್ಲಿ 2-3 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು.
ಮಸೂದೆ ನಿಬಂಧನೆಗಳ ಪ್ರಕಾರ ಮಕ್ಕಳು ತಮ್ಮ ಶಾಲಾ ಸಮಯದ ನಂತರ ತಮ್ಮದೇ ಮನೆಯಲ್ಲಿ ಪೋಷಕರಿಗೆ ಸಹಾಯ ಮಾಡುವುದು, ಪೋಷಕರ ಸ್ವಂತ ಗದ್ದೆ, ತೋಟದ ಕೆಲಸದಲ್ಲಿ, ಅಥವಾ ರಜಾ ದಿನಗಳಲ್ಲಿ ಕಟ್ಟಿಗೆ ಜೋಡಿಸುವುದು, ಕಲಿಕೆಯ ಉದ್ದೇಶಕ್ಕಾಗಿ ತಾಂತ್ರಿಕ ಸಂಸ್ಥೆಗಳಿಗೆ ಸೇರುವುದು ಇತರ ಗೃಹೋಪಯೋಗಿ ಆಧಾರಿತ ಕೆಲಸಗಳಲ್ಲಿ ಮಾತ್ರವೇ ಕೈಜೋಡಿಸಬಹುದಾಗಿದೆ.
ಬಾಲ ಕಾರ್ಮಿಕರ ಸಂಪೂರ್ಣ ನಿರ್ಮೂಲನೆಯ ಗುರಿಯೊಂದಿಗೆ ಈ ಐತಿಹಾಸಿಕ ಹೆಜ್ಜೆ ಇಡಲಾಗಿದೆ ಎಂದು ಉದ್ಯೋಗ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.