ನವದೆಹಲಿ: ರೈಲ್ವೆ ಸಂಚಾರದ ಸಂದರ್ಭ ಕೆಟ್ಟ ಹವಾಮಾನ ಸೂಚಿಸಲು ರೈಲುಗಳಲ್ಲಿ ‘ತ್ರಿನೇತ್ರ’ ಎಂಬ ಸಾಧನವನ್ನು ಶೀಘ್ರದಲ್ಲೇ ಅಳವಡಿಸಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.
ತ್ರಿನೇತ್ರ ಸಾಧನವು ಹೈ- ರೆಸೊಲ್ಯೂಷನ್ ಆಪ್ಟಿಕಲ್ ವೀಡಿಯೋ ಕ್ಯಾಮೆರಾ, ಹೈ- ಸೆನ್ಸಿಟಿವ್ ಇನ್ಫ್ರಾರೆಡ್ ಕ್ಯಾಮೆರಾ ಹಾಗೂ ಹೆಚ್ಚುವರಿ ರೆಡಾರ್-ಆಧಾರಿತ ಭೂಪ್ರದೇಶ ಮ್ಯಾಪಿಂಗ್ ವ್ಯವಸ್ಥೆಯನ್ನು ಹೊಂದಿದೆ.
ಈ ಸಾಧನ ವ್ಯವಸ್ಥೆ ರೈಲು ಚಾಲಕನ ಮೂರನೇ ಕಣ್ಣು (ತ್ರಿನೇತ್ರ) ಎಂದು ಪರಿಗಣಿಸಲಾಗಿದ್ದು, ಭೂಭಾಗವನ್ನು ಚಿತ್ರಿಸಲು ಸಹಕಾರಿಯಾಗಲಿದೆ.
ಭಾರೀ ಮಳೆ, ರಾತ್ರಿ ವೇಳೆ ಹಾಗೂ ಚಳಿಗಾಲದಲ್ಲಿ ಮಂಜು ಇದ್ದ ಸಂದರ್ಭ ರೈಲು ಟ್ರ್ಯಾಕ್ನ ವೀಡಿಯೋ ಚಿತ್ರಣ ಕಂಪ್ಯೂಟರ್ ಮಾನಿಟರ್ ಸಹಾಯದಿಂದ ಚಾಲಕರಿಗೆ ಕಾಣಿಸಲಿದೆ. ಇದು ಹೆಚ್ಚಿನ ಅಪಘಾತಗಳನ್ನು ತಡೆಯಲು ಸಹಾಯಕವಾಗಲಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.