ಹೈದರಾಬಾದ್: ದೇಶದ ಪ್ರಪ್ರಥಮ ಇ-ಕೋರ್ಟ್ ಹೈದರಾಬಾದ್ನಲ್ಲಿ ಭಾನುವಾರ ಉದ್ಘಾಟನೆಯಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಪ್ರಸ್ತುತ ಒಂದೇ ಹೈಕೋರ್ಟ್ ಕಾರ್ಯ ನಿರ್ವಹಿಸಲಿದೆ.
ಇಂಟಿಗ್ರೇಟೆಡ್ ಅಪರಾಧ ನ್ಯಾಯ ವ್ಯವಸ್ಥೆ ಯೋಜನೆಗಾಗಿ ಇ-ಕೋರ್ಟ್ ಸ್ಥಾಪನೆಯಾಗಿದ್ದು, ತಂತ್ರಜ್ಞಾನದಲ್ಲಿ ಎರಡು ರಾಜ್ಯಗಳು ಸಾಧಿಸಿರುವ ಅಭಿವೃದ್ಧಿಯೇ ಪ್ರಮುಖ ಕಾರಣವಾಗಿದೆ. ಪೊಲೀಸ್ ಠಾಣೆಗಳು, ಜೈಲುಗಳು, ವಿಧಿ ವಿಜ್ಞಾನ ಪ್ರಯೋಗಾಲಯಗಳು, ಕಾನೂನು ಕ್ರಮ ಇವೆಲ್ಲವೂ ನ್ಯಾಯಾಲಯದ ಜೊತೆ ಸಂಯೋಜನೆಯಾಗಲು ಇದನ್ನು ಸ್ಥಾಪಿಸಲಾಗಿದೆ. ಸಂಪೂರ್ಣ ಗಣಕೀಕೃತ ವ್ಯವಸ್ಥೆ ಹೊಂದಿರುವ ಇ-ಕೋರ್ಟ್ ಕಾಗದ ಮುಕ್ತ ನ್ಯಾಯಾಲಯವಾಗಲಿದೆ. ಈ ವ್ಯವಸ್ಥೆ ಎಲ್ಲರಿಗೂ ಸಹಕಾರಿಯಾಗಲಿದ್ದು ಈ ವ್ಯವಸ್ಥೆ ಎಲ್ಲೆಡೆ ಬರಬೇಕು ಎಂದು ಇ-ಕೋರ್ಟ್ ಉದ್ಘಾಟಿಸಿದ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಅವರು ಹೇಳಿದರು.
ಜುಲೈ 28 ರಿಂದ ಅಧಿಕೃತ ಸೇವೆಗಳು ಪ್ರಾರಂಭವಾಗಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.