ನವದೆಹಲಿ: ವಿಶ್ವಪಾರಂಪರಿಕ ತಾಣಗಳ ಪಟ್ಟಿಯನ್ನು ಯುನೆಸ್ಕೋ ಭಾನುವಾರ ಬಿಡುಗಡೆ ಮಾಡಿದ್ದು, ಭಾರತದ ಮೂರು ತಾಣಗಳನ್ನು ಈ ಪಟ್ಟಿಗೆ ಸೇರಿಸಿದೆ.
ಸಿಕ್ಕಿಂ ರಾಷ್ಟ್ರೀಯ ಉದ್ಯಾನ ಮತ್ತು ಚಂಡೀಗಢದ ಕ್ಯಾಪಿಟಲ್ ಕಾಂಪ್ಲೆಕ್ಸ್ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ.
ಇಸ್ತಾನ್ಬುಲ್ನಲ್ಲಿ ನಡೆದ ವಿಶ್ವ ಪರಂಪರೆ ಸಮಿತಿ ಸಭೆಯ 40ನೇ ಅಧಿವೇಶನದಲ್ಲಿ ಬಿಹಾರದ ನಳಂದ ವಿಶ್ವವಿದ್ಯಾಲಯವನ್ನು ಸೇರಿಸಿದ ಬಳಿಕ ಈ ತಾಣಗಳನ್ನು ಸೇರಿಸಲಾಗಿದೆ.
ವಿಶ್ವ ಪರಂಪರೆ ಸಮಿತಿ ಸಭೆಯ ಒಂದು ಅಧಿವೇಶನದಲ್ಲೇ ಯಾವುದೇ ದೇಶದ ಮೂರು ತಾಣಗಳನ್ನು ಸೇರಿಸಿರುವುದು ಇದೇ ಮೊದಲು ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
7 ರಾಷ್ಟ್ರಗಳ 17 ತಾಣಗಳಲ್ಲಿ ಭಾರತದ ಈ ಮೂರು ತಾಣಗಳು ಸೇರಿವೆ. ಚಂಡೀಗಢದ ಕ್ಯಾಪಿಟಲ್ ಕಂಪ್ಲೆಕ್ಸ್ನ್ನು ಲೀ ಕಾಬುಸಿಯರ್ ಎಂದೇ ಪ್ರಖ್ಯಾತರಾದ ಚಾರ್ಲ್ಸ್ ಎಡಾರ್ಡ್ ಜೀನ್ನೆರೆಟ್ ಗ್ರಿಸ್ 1950ರಲ್ಲಿ ಫ್ರಾಂಕೋ-ಸ್ವಿಸ್ ಮಾದರಿಯಲ್ಲಿ ವಿನ್ಯಾಸ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.